ವಿಮಾನ ಪ್ರಯಾಣ ನಿಷೇಧ ಉಲ್ಲಂಘಿಸಿದರೆ ದಂಡ: ಸೌದಿ ಅರೇಬಿಯಾ ಎಚ್ಚರಿಕೆ
ರಿಯಾದ್, ಆ.2: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ವಿಮಾನ ಪ್ರಯಾಣ ನಿಷೇಧವನ್ನು ಉಲ್ಲಂಘಿಸಿದ ಪ್ರಯಾಣಿಕರಿಗೆ 1,33,323 ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸೌದಿ ಅರೆಬಿಯಾ ಎಚ್ಚರಿಸಿದೆ.
ಕೊರೋನ ಸೋಂಕು ಹೆಚ್ಚಿರುವ ದೇಶಗಳಿಗೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸಲಾಗಿದೆ. ಇದನ್ನು ಮೀರಿ ಆ ದೇಶಗಳಿಗೆ ಪ್ರಯಾಣಿಸುವವರು ಹಾಗೂ ಸಾರಿಗೆ ಸಂಸ್ಥೆಗಳಿಗೆ ದಂಡ ಅನ್ವಯಿಸುತ್ತದೆ ಎಂದು ಸೌದಿ ಅರೇಬಿಯಾದ ಅಭಿಯೋಜಕರ ಕಚೇರಿ ಎಚ್ಚರಿಸಿದೆ.
ನಿಷೇಧದ ಪಟ್ಟಿಯಲ್ಲಿರುವ ದೇಶಗಳಿಗೆ ಭೇಟಿ ನೀಡಿರುವ ಮಾಹಿತಿ ನೀಡದವರಿಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಸೌದಿ ಅರೆಬಿಯಾ ಕೊರೋನ ವಿರುದ್ಧದ ಲಸಿಕಾ ಅಭಿಯಾನ ತೀವ್ರಗೊಳಿಸಿದ್ದು ದಿನಂಪ್ರತಿ ಸುಮಾರು 3,50,000 ಡೋಸ್ ಲಸಿಕೆ ನೀಡಲಾಗುತ್ತಿದೆ. ಇದರೊಂದಿಗೆ ದೇಶದಲ್ಲಿ ಲಸಿಕೆ ಪಡೆದವರ ಪ್ರಮಾಣ 78%ಕ್ಕೆ ತಲುಪಿದೆ.
Next Story