ಒಲಿಂಪಿಕ್ಸ್:ಕಂಚಿಗಾಗಿ ಜರ್ಮನಿ ವಿರುದ್ಧ ಸೆಣಸಲಿರುವ ಭಾರತದ ಪುರುಷರ ಹಾಕಿ ತಂಡ
photo : twitter/@ddsportschannel
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-5 ಗೋಲುಗಳ ಅಂತರದಿಂದ ಸೋತಿರುವ ಭಾರತದ ಚಿನ್ನದ ಪದಕ ಬಾಚಿಕೊಳ್ಳುವ ಕನಸು ಭಗ್ನವಾಗಿದೆ.
ಭಾರತಕ್ಕೆ 41 ವರ್ಷಗಳ ಬಳಿಕ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿದರೂ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ಪಡೆದುಕೊಂಡಿದೆ.
ಗುರುವಾರ ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಜರ್ಮನಿ ತಂಡದ ಸವಾಲು ಎದುರಿಸಲಿದೆ. ಜರ್ಮನಿಯು ಮತ್ತೊಂದು ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯದ ವಿರುದ್ಧ 1-3 ಗೋಲುಗಳ ಅಂತರದಿಂದ ಸೋತಿತ್ತು.
Next Story