ಬ್ರಿಟನ್ ನ ‘ಗ್ರೀನ್ ಲಿಸ್ಟ್’ನಲ್ಲಿ ಸೌದಿ ಅರೇಬಿಯ
ದುಬೈ, ಆ. 3: ಬ್ರಿಟನ್ ನ ‘ಗ್ರೀನ್ ವಾಚ್ ಲಿಸ್ಟ್’ನಲ್ಲಿ ಸೌದಿ ಅರೇಬಿಯವನ್ನು ಸೇರಿಸಲಾಗಿದೆ ಎಂದು ಬ್ರಿಟಿಶ್ ದೈನಿಕ ‘ಐನ್ಯೂಸ್’ ವರದಿ ಮಾಡಿದೆ. ಇದರ ಪ್ರಕಾರ, ಲಸಿಕೆಗಳ ಸಂಪೂರ್ಣ ಡೋಸ್ ಗಳನ್ನು ತೆಗೆದುಕೊಂಡ ಸೌದಿ ಅರೇಬಿಯದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೆ ಬ್ರಿಟನ್ ಗೆ ಮರಳಬಹುದಾಗಿದೆ.
ಭೂತಾನ್, ಫ್ರೆಂಚ್ ಪೋಲಿನೇಶ್ಯ, ನಾರ್ತ್ ಮೆಸಡೋನಿಯ ಮತ್ತು ನಾರ್ವೆ ಸೇರಿದಂತೆ ಇತರ ನಾಲ್ಕು ದೇಶಗಳೂ ಬ್ರಿಟನ್ ನ ಗ್ರೀನ್ ವಾಚ್ ಲಿಸ್ಟ್ ನಲ್ಲಿವೆ ಎಂದು ವರದಿ ತಿಳಿಸಿದೆ.
ಇತ್ತೀಚಿನ ಕೊರೋನ ವೈರಸ್ ಪರಿಸ್ಥಿತಿ ಮತ್ತು ಲಸಿಕೀಕರಣದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಇತರ ಹಲವು ದೇಶಗಳನ್ನೂ ಈ ಪಟ್ಟಿಗೆ ಸೇರಿಸುವ ಸಾಧ್ಯತೆಗಳಿವೆ ಎಂದು ಪತ್ರಿಕೆ ವರದಿ ಮಾಡಿದೆ.
Next Story