ಮಂಗಳೂರಿನಲ್ಲಿ ಮತ್ತೆ ಮಳೆ ಚುರುಕು
ಸಾಂದರ್ಭಿಕ ಚಿತ್ರ
ಮಂಗಳೂರು, ಆ.7: ಕರಾವಳಿಯಲ್ಲಿ ಹಲವು ದಿನಗಳಿಂದ ಮತ್ತೆ ಮಳೆ ಚುರುಕು ಪಡೆದಿದೆ. ಶನಿವಾರ ಉತ್ತಮ ಮಳೆ ಸುರಿದಿದೆ. ಬೆಳಗ್ಗಿನಿಂದ ರಾತ್ರಿಯವರೆಗೂ ಬಿಟ್ಟೂ ಬಿಟ್ಟು ಧಾರಾಕಾರ ಮಳೆಯಾಗಿದೆ.
ಮಳೆಯಿಂದಾಗಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯೊಳಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಎರಡು ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದರೆ, ಆರು ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಇನ್ನೂ 2-3 ದಿನ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.
ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ 56.1 ಮಿ.ಮೀ., ಬಂಟ್ವಾಳದಲ್ಲಿ 26.1 ಮಿ.ಮೀ., ಮಂಗಳೂರಿನಲ್ಲಿ 13.5 ಮಿ.ಮೀ., ಪುತ್ತೂರಿನಲ್ಲಿ 33.8 ಮಿ.ಮೀ., ಸುಳ್ಯದಲ್ಲಿ 37.4 ಮಿ.ಮೀ., ಮೂಡುಬಿದಿರೆಯಲ್ಲಿ 43.5 ಮಿ.ಮೀ., ಕಡಬದಲ್ಲಿ 48.4 ಮಿ.ಮೀ. ಮಳೆ ದಾಖಲಾಗಿದೆ.
Next Story