ಗಂಗೊಳ್ಳಿ: ತೌಹೀದ್ ಆಂಗ್ಲ ಮಾಧ್ಯಮ ಶಾಲೆಗೆ 100 ಶೇ. ಫಲಿತಾಂಶ
ಕುಂದಾಪುರ, ಆ.12: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆ 100 ಶೇ. ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ 54 ವಿದ್ಯಾರ್ಥಿಗಳ ಪೈಕಿ 13 ಮಂದಿ ವಿಶಿಷ್ಟ ಶ್ರೇಣಿ, 32 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಝ್ಕ ಅನಮ್ 97.44 ಶೇ., ಅಯಿಶಾ ಸರ್ವಾ ಎಂ.ಎಚ್. 94.24 ಶೇ. ಹಾಗೂ ಸೆಹ್ರಿಶ್ ಸಯೀದ್ 93.12 ಶೇ. ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Next Story