ಶೇಖಬ್ಬ ಹಾಜಿ
ಉಳ್ಳಾಲ : ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಮಾಜಿ ಕಾರ್ಯದರ್ಶಿ ಹಾಗೂ ಹಲವಾರು ವರ್ಷಗಳ ಕಾಲ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಶೇಖಬ್ಬ ಹಾಜಿ (82) ಅಲ್ಪ ಕಾಲದ ಅನಾರೋಗ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ: ದೇರಳಕಟ್ಟೆ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಅಹ್ಮದ್, ರಶೀದ್, ಬದ್ರಿಯಾ ಜುಮಾ ಮಸೀದಿ ಖತೀಬ್ ಇಸಾಕ್ ಫೈಝಿ, ಏಷ್ಯನ್ ಬಾವ ಹಾಜಿ, ಅಬ್ಬಾಸ್ ಹಾಜಿ, ಡಿ.ಎ. ಅಶ್ರಫ್, ಮುಹಮ್ಮದಾಲಿ, ಸಿದ್ದಿಕ್ ಹಾಗು ಇತರರು ಸಂತಾಪ ವ್ಯಕ್ತಪಡಿಸಿದರು.
Next Story