ಮೂಡುಗಿಳಿಯಾರಿನಲ್ಲಿ ಮಂಗಗಳ ಸಾವು: ಸ್ಥಳೀಯರಲ್ಲಿ ಆತಂಕ
ಕೋಟ, ಆ.23: ಕೋಟ ಗ್ರಾಪಂ ವ್ಯಾಪ್ತಿಯ ಮೂಡುಗಿಳಿಯಾರಿನಲ್ಲಿ ಕಳೆದ 15 ದಿನಗಳಲ್ಲಿ ಎರಡು ಮಂಗಗಳು ಸಾವನ್ನಪ್ಪಿದ್ದು, ಈ ಬಗ್ಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
15 ದಿನಗಳ ಹಿಂದೆ ಇಲ್ಲಿ ಒಂದು ಮಂಗ ಮೃತಪಟ್ಟರೆ, ಇಲ್ಲಿಂದ 200 ಮೀಟರ್ ದೂರ ಇನ್ನೊಂದು ಜಾಗದಲ್ಲಿ ಇಂದು ಇನ್ನೊಂದು ಮಂಗ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ಅರಣ್ಯ ಇಲಾಖೆ ಸಿಬ್ಬಂದಿ ಅಕ್ಷತಾ ಪರಿಶೀಲಿಸಿದರು.
ಪಂಚಾಯತ್ ಸಹಕಾರದೊಂದಿಗೆ ಮಂಗನ ಕಳೇಬರಹವನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಮಂಗನ ಮಾದರಿ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಅಧ್ಯಕ್ಷ ಅಜಿತ್ ದೇವಾಡಿಗ, ತಾ.ಪಂ ಮಾಜಿ ಸದಸ್ಯ ಭರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Next Story