ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಅಹ್ವಾನ
ಉಡುಪಿ, ಆ.29: ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಗ್ರಾಪಂ ವ್ಯಾಪ್ತಿ, ನಗರಸಭೆ ವ್ಯಾಪ್ತಿ ಮತ್ತು ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಗಳಾದ ಮೇಲ್ಬೆಳಂಜಾಲ್, ಉದ್ಯಾವರ ಪಡುಕೆರೆ, ಕಳತ್ತೂರು-1ರ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಹಾಗೂ ಅಂಗನವಾಡಿ ಕೇಂದ್ರಗಳಾದ ಬೀಡುಬದಿ, ಮೂಳೂರು, ನಿಟ್ಟೂರು, ದುಗ್ಲಿಪದವು, ಕೋಟೆಪಟ್ನ, ಉದ್ಯಾವರ ಪಡುಕೆರೆ, ಎಲ್ಲೂರು ಕುಕ್ಕಿಕಟ್ಟೆ ಅಂಗನವಾಡಿ ಸಹಾಯಕಿ ಹುದ್ದೆಗೆ 18ರಿಂದ 35 ವರ್ಷದೊಳಗಿನ ಕಾರ್ಯಕರ್ತೆಯರ ಹುದ್ದೆಗೆ ಗರಿಷ್ಠ ಎಸೆಸೆಲ್ಸಿ ತೇರ್ಗಡೆ ಗೊಂಡಿರುವ ಮತ್ತು ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ತೇರ್ಗಡೆ ಯಾಗಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ವೆಬ್ಸೈಟ್- http://udupi.nic.in-ನಲ್ಲಿ ಸೆ.20ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story