ಆ.31: ಮಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ
ಮಂಗಳೂರು, ಆ.30: ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ರಥಬೀದಿ ಫೀಡರ್ನಲ್ಲಿ ಆ.31ರಂದು ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಆ.31ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್ ಸ್ಟ್ರೀಟ್, ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಪುತ್ತು ಪ್ರಭುಲೇನ್, ಕಾರ್ಪೊರೇಶನ್ ಬ್ಯಾಂಕ್, ಗಾಯತ್ರಿ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನೆಹರೂ ಮೈದಾನ: ನಗರದ 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಪಾಂಡೇಶ್ವರ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಆ.31ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎ.ಬಿ. ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಮಹಾಲಿಂಗೇಶ್ವರ ಟೆಂಪಲ್, ಅಮೃತನಗರ, ರೋಸಾರಿಯೋ ಚರ್ಚ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.