ಬಾಂಗ್ಲಾದ ಮಹಿಳಾ ವಿಜ್ಞಾನಿ ಸೇರಿದಂತೆ ಐವರಿಗೆ ಮ್ಯಾಗ್ಸೆಸೆ ಪ್ರಶಸ್ತಿ
photo: twitter/@anupamdkan
ಢಾಕಾ, ಸೆ.1: ಬಾಂಗ್ಲಾದೇಶದ ಲಸಿಕೆ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ ಮತ್ತು ಪಾಕಿಸ್ತಾನದ ಉದ್ಯಮಿ ಮುಹಮ್ಮದ್ ಅಮ್ಜದ್ ಸಾಖಿಬ್ ಸಹಿತ 5 ಮಂದಿಯನ್ನು ಏಶ್ಯಾದ ನೊಬೆಲ್ ಪುರಸ್ಕಾರ ಎಂದೇ ಪರಿಗಣಿತವಾಗಿರುವ ಪ್ರತಿಷ್ಟಿತ ರಮನ್ ಮೆಗ್ಸೆೀಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .
ಬ್ರಿಟನ್ನ ಲಿವರ್ಪೂಲ್ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಖಾದ್ರಿ 1988ರಲ್ಲಿ ಬಾಂಗ್ಲಾದೇಶದ ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಡಯರೋಯಿಯಲ್ ಡಿಸೀಸ್ ರಿಸರ್ಚ್’ಗೆ ಸೇರಿದರು. ವೈಜ್ಞಾನಿಕ ವೃತ್ತಿಯಲ್ಲಿ ಅವರಿಗಿರುವ ಅಭಿಲಾಷೆ ಮತ್ತು ಜೀವನಪೂರ್ತಿ ನಿಷ್ಟೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.
ಡಾ. ಖಾದ್ರಿ, ಮುಹಮ್ಮದ್ ಅಮ್ಜದ್, ಫಿಲಿಪ್ಪೀನ್ಸ್ನ ಮೀನುಗಾರ ಮತ್ತು ಸಮುದಾಯ ಪರಿಸರವಾದಿ ರೋಬರ್ಟೊ ಬಲ್ಲೋನ್, ವಲಸಿಗರಿಗೆ ನೆರವು ಮತ್ತು ಮಾನವೀಯ ಕಾರ್ಯಕ್ಕಾಗಿ ಅಮೆರಿಕಾದ ಸ್ಟೀವನ್ ಮುನ್ಸಿ, ತನಿಖಾ ಪತ್ರಿಕೋದ್ಯಮದ ವಿಭಾಗದಲ್ಲಿ ಇಂಡೋನೇಶ್ಯಾದ ವಾಚ್ಡಾಕ್ ಸಂಸ್ಥೆಗೆ ಪುರಸ್ಕಾರ ಸಂದಿದೆ.
Next Story