ದ.ಕ: ಜಿಲ್ಲೆಯ 6 ಗ್ರಾಮಗಳಲ್ಲಿ ಪ್ರಥಮ ಡೋಸ್ ಶೇ.100ರ ಸಾಧನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ನಿರೋಧಕ ಲಸಿಕೆ ನೀಡುವ ಅಭಿಯಾನ ವೇಗಗತಿಯಲ್ಲಿ ಸಾಗುತ್ತಿದ್ದು, ಸದ್ಯ ಜಿಲ್ಲೆಯ 6 ಗ್ರಾಮಗಳು ಪ್ರಥಮ ಡೋಸ್ನ್ನು ಯಶಸ್ವಿಯಾಗಿ ಪೂರೈಸಿದ್ದು, ಶೇ.100 ಸಾಧನೆ ತೋರಿವೆ.
ಬಂಟ್ವಾಳ ತಾಲೂಕಿನ ಅಳಿಕೆ ಮತ್ತು ಪೆರುವಾಯಿ ಮಾಣಿಲ, ಪುತ್ತೂರು ತಾಲೂಕಿನ ಬಡಗನ್ನೂರು, ಪಡುವಣ್ಣೂರು, ಸಿರಿಬಾಗಿಲು, ಮತ್ತು ಬೆಳ್ತಂಗಡಿ ತಾಲೂಕಿನ ಲಾಲಾ ಗ್ರಾಮಗಳಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಪ್ರಥಮ ಡೋಸ್ನ್ನು ಯಶಸ್ವಿಯಾಗಿ ನೀಡಲಾಗಿದೆ.
ಬಂಟ್ವಾಳ ತಾಲೂಕಿನ ಅಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಎಲ್ಲಾ 3774 ಮಂದಿ ಲಸಿಕೆ ನೀಡಲಾಗಿದೆ. ಅದೇ ರೀತಿ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ ಪೆರುವಾಯಿ ಮಾಣಿಲದ 4525, ಪುತ್ತೂರು ತಾಲೂಕಿನ ಈಶ್ವರಮಂಗಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ ಬಡಗನ್ನೂರುವಿನ 2139, ಅದೇರೀತಿ ಪಡುವಣ್ಣೂರಿನ 2388, ಪುತ್ತೂರು ತಾಲೂಕಿನ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ ಸಿರಿಬಾಗಿಲಿನ 561, ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆಬರುವ ಲಾಲಾ ಗ್ರಾಮದ 5070 ಮಂದಿಗೆ ಪ್ರಥಮ ಡೋಸ್ನ್ನು ನೀಡಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.