ಹೊಸ ಶ್ರೇಣಿಯ ಎರಡು ವೀಸಾ ಘೋಷಿಸಿದ ಯುಎಇ
ದುಬೈ, ಸೆ.5: ತನ್ನ ಮಹಾತ್ವಾಕಾಂಕ್ಷೆಯ ಆರ್ಥಿಕ ಪರಿವರ್ತನೆ ಯೋಜನೆಯಡಿ ವಿಶ್ವದ ಪ್ರತಿಭಾನ್ವಿತರನ್ನು ಆಕರ್ಷಿಸುವ ಉಪಕ್ರಮಕ್ಕೆ ಪೂರಕವಾಗಿ ಗ್ರೀನ್ ವೀಸಾ ಮತ್ತು ಫ್ರೀಲ್ಯಾನ್ಸ್ ವೀಸಾ ಎಂಬ 2 ಹೊಸ ಶ್ರೇಣಿಯ ವೀಸಾಗಳನ್ನು ಆರಂಭಿಸುವುದಾಗಿ ಯುಎಇ ಘೋಷಿಸಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳು, ಹೂಡಿಕೆದಾರರು, ಉದ್ಯಮಿಗಳು ಹಾಗೂ ವಿಶೇಷ ಕೌಶಲ್ಯ ಇರುವವರು ಗ್ರೀನ್ ವೀಸಾ ಪಡೆಯಲು ಅರ್ಹರು. ಈ ವೀಸಾ ಪಡೆಯುವವರು 25 ವರ್ಷವಾಗುವವರೆಗೆ ತಮ್ಮ ಪೋಷಕರನ್ನು ಅಥವಾ ಪುತ್ರರನ್ನು ಪ್ರಾಯೋಜಿಸಬಹುದು. ವೀಸಾದ ವಾಯಿದೆ ಮುಗಿದ ಬಳಿಕ ಅವರಿಗೆ 90ರಿಂದ 180 ದಿನದವರೆಗಿನ ರಿಯಾಯಿತಿ ಅವಧಿ ನೀಡಲಾಗುವುದು. ಉದ್ಯಮಿಗಳು, ಸ್ವೋದ್ಯೋಗಿಗಳು ಫ್ರೀಲ್ಯಾನ್ಸ್ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಯುಎಇಯ ವಿದೇಶ ವ್ಯಾಪಾರ ಇಲಾಖೆಯ ಸಹಾಯಕ ಸಚಿವ ಥಾನಿ ಬಿನ್ ಅಹ್ಮದ್ ಅಲ್ಝೆಯೂದಿ ಹೇಳಿದ್ದಾರೆ.
Next Story