ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ 'ಡೇರ್ ಡೆವಿಲ್ ಮುಸ್ತಫಾ' ಚಿತ್ರದ ಇಣುಕು ನೋಟ ಬಿಡುಗಡೆ
ಓದುಗರೇ ನಿರ್ಮಿಸುತ್ತಿರುವ ಸಿನಿಮಾ
Photo: Facebook/shashank.soghal
ಬೆಂಗಳೂರು: ಖ್ಯಾತ ಲೇಖಕ ಪೂರ್ಣ ಚಂದ್ರ ತೇಜಸ್ವಿಯವರ 83 ನೇ ಹುಟ್ಟುಹಬ್ಬದ ಸಲುವಾಗಿ ಅವರದ್ದೇ ಕಥೆಯನ್ನು ಆಧರಿಸಿದ ಡೇರ್ ಡೆವಿಲ್ ಮುಸ್ತಫಾ ಸಿನಿಮಾವು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದೀಗ ಈ ಚಿತ್ರದ ಇಣುಕುನೋಟ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ.
ರೆಟ್ರೋಗ್ರಾಮ್ ಎಂಬ ವಿಶಿಷ್ಟ ಪರಿಕಲ್ಪನೆಯ ಮೂಲಕ ʼಜಯಮಾಲಾ ದಮಯಂತಿ ಯಾರಪ್ಪ?ʼ ಎಂಬ ಹಾಡಿನ ಜೊತೆಗೆ ಸಿನಿಮಾದ ಪಾತ್ರ ಪರಿಚಯ ಹಾಗೂ ಪೋಸ್ಟರ್ ಅನ್ನು ಅನ್ನು ಬಿಡುಗಡೆಗೊಳಿಸಲಾಗಿದೆ.
ಪೂರ್ಣಚಂದ್ರ ತೇಜಸ್ವಿಯವರ 65 ಮಂದಿ ಅಭಿಮಾನಿಗಳು ಸೇರಿಕೊಂಡು ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷವಾಗಿದೆ. ಚಿತ್ರವನ್ನು ಶಶಾಂಕ್ ಸೋಗಲ್ ನಿರ್ದೇಶಿಸಿದ್ದು, ರಾಹುಲ್ ರಾಯ್ ಕ್ಯಾಮರಾ ಹಾಗೂ ನವನೀತ್ ಶ್ಯಾಮ್ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಮಂಡ್ಯ ರಮೇಶ್, ಚೈತ್ರಾ ಶೆಟ್ಟಿ, ಪೂರ್ಣಚಂದ್ರ ಮೈಸೂರು, ನಾಗಭೂಷಣ್ ಸೇರಿದಂತೆ ಹಲವು ನಟಿಸಿದ್ದಾರೆ.