ದ.ಕ. ಜಿಲ್ಲೆ : ಒಂದೇ ದಿನದಲ್ಲಿ 53 ಸಾವಿರ ಮಂದಿಗೆ ಲಸಿಕೆ
ಮಂಗಳೂರು, ಸೆ.8: ಕೋವಿಡ್ ನಿಯಂತ್ರಣಕ್ಕಾಗಿ ದ.ಕ. ಜಿಲ್ಲಾದ್ಯಂತ ಬುಧವಾರ ವಿಶೇಷ ಲಕ್ಷ ಲಸಿಕೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ದಿನ 53,049 ಮಂದಿಗೆ ಲಸಿಕೆ ಹಾಕಲಾಗಿದೆ.
ಮಂಗಳೂರು-24,465, ಬಂಟ್ವಾಳ-6507, ಬೆಳ್ತಂಗಡಿ-9252, ಪುತ್ತೂರು-8754, ಸುಳ್ಯ-4071 ಮಂದಿಗೆ ಲಸಿಕೆ ನೀಡಲಾಯಿತು. ಈ ದಿನ ನೀಡಿದ ಲಸಿಕೆಯಲ್ಲಿ ಮಂಗಳೂರಿನಲ್ಲಿಯೇ ಅತಿಹೆಚ್ಚು ಸಂಖ್ಯೆಯ ಜನತೆ ಶಿಬಿರಗಳಿಗೆ ಆಗಮಿಸಿ ಲಸಿಕೆ ಪಡೆದಿದ್ದಾರೆ.
ಸೋಮವಾರ 39,187 ಮಂದಿ ಲಸಿಕೆ ಪಡೆದಿದ್ದರೆ, ಮಂಗಳವಾರ 29,996 ಮಂದಿ ಲಸಿಕೆ ಹಾಕಿಸಿಕೊಂಡಿದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಟನೆ ತಿಳಿಸಿದೆ.
Next Story