varthabharthi


ಅಂತಾರಾಷ್ಟ್ರೀಯ

ಚೀನಾದಲ್ಲಿ ಡೆಲ್ಟಾ ಕಾಟ: ಒಂದೇ ದಿನ 59 ಮಂದಿಗೆ ಸೋಂಕು

ವಾರ್ತಾ ಭಾರತಿ : 14 Sep, 2021

ಹೊಸದಿಲ್ಲಿ, ಆ.14: ಡೆಲ್ಟಾ ಪ್ರಭೇದದ ಕೊರೋನ ವೈರಸ್ನ ಹಾವಳಿ ಚೀನಾದಲ್ಲಿ ಮತ್ತೆ ತಲೆದೋರಿದ್ದು, ಮಂಗಳವಾರ 59 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ನಿನ್ನೆಗಿಂತ 22ರಷ್ಟು ಅಧಿಕವಾಗಿದೆ. ಈ ಎಲ್ಲಾ ಪ್ರಕರಣಗಳು ಫ್ಯೂಜಿಯಾನ್ನಿಂದಲೇ ವರದಿಯಾಗಿವೆ.

ಆಗ್ನೇಯ ಚೀನಾ ಪ್ರಾಂತವಾದ ಫ್ಯೂಜಿಯಾನ್ನಲ್ಲಿ ಡೆಲ್ಟಾ ಪ್ರಭೇದದ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಎರಡುಪಟ್ಟು ಏರಿಕೆಯಾಗಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಚೀನಾ ಹರಸಾಹಸ ನಡೆಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ಫ್ಯೂಜಿಯಾನ್ ಪ್ರಾಂತದಲ್ಲಿ ಒಟ್ಟು 102 ಸಾಮುದಾಯಿಕ ಸೋಂಕಿನ ಪ್ರಕರಣಗಳು ವರದಿಯಾಗಿರುವುದಾಗಿ ಚೀನಿ ಮಾಧ್ಯಮಗಳು ತಿಳಿಸಿವೆ.

ಫ್ಯೂಜಿಯಾನ್ ಪ್ರಾಂತದ 30.2 ಲಕ್ಷ ಜನಸಂಖ್ಯೆಯ ಪುತಿಯಾನ್ ನಗರದಲ್ಲಿ ಮೊದಲ ಡೆಲ್ಟಾ ವೈರಸ್ ಸೋಂಕು ಪ್ರಕರಣ ವರದಿಯಾಗಿತ್ತು. ಕ್ಸಿಯಾಮೆನ್ ಪ್ರಾಂತದಿಂದ ದಕ್ಷಿಣ ಪ್ರಾಂತಗಳಿಗೆ ಈ ವೈರಸ್ ಹರಡುತ್ತಿದೆಯೆಂದು ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.
  ಡೆಲ್ಟಾ ಪ್ರಭೇದದ ಕೊರೋನ ವೈರಸ್ನ ಹಡುವಿಕೆಯು ಪುತಿಯಾನ್ ನಗರದ ಪ್ರಾಥಮಿಕ ಶಾಲೆಯೊಂದರಲ್ಲಿ ಆರಂಭಗೊಂಡಿರಬೇಕೆಂದು ಆರೋಗ್ಯಾಧಿಕಾರಿಗಳು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ನಗರದ ಶಾಲೆಗಳನ್ನು ಮುಚ್ಚುಗಡೆಗೊಳಿಸಲಾಗಿದ್ದು, ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)