varthabharthi


ರಾಷ್ಟ್ರೀಯ

ನ್ಯಾಯಾಧಿಕರಣದ ನೇಮಕಾತಿ:ಕೇಂದ್ರ ಸರಕಾರವನ್ನು ಮತ್ತೊಮ್ಮೆ ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್

ವಾರ್ತಾ ಭಾರತಿ : 15 Sep, 2021

ಹೊಸದಿಲ್ಲಿ: ನ್ಯಾಯಾಧಿಕರಣದ ನೇಮಕಾತಿಗಾಗಿ ತನ್ನ ಶಿಫಾರಸುಗಳಿಂದ ತನಗೆ "ಬೇಕಾದವರನ್ನು ಆಯ್ಕೆ ಮಾಡಿದ್ದಕ್ಕೆ’’ ಸುಪ್ರೀಂ ಕೋರ್ಟ್ ಇಂದು ಮತ್ತೊಮ್ಮೆ ಸರಕಾರವನ್ನು ಟೀಕಿಸಿದೆ. ದೇಶಾದ್ಯಂತ ವಿವಿಧ ಟ್ರಿಬ್ಯೂನಲ್ ಗಳ  ನೇಮಕಾತಿ ಮಾಡಲು ಸರಕಾರಕ್ಕೆ ಕೊನೆಯ ಬಾರಿ ಇನ್ನೂ ಎರಡು ವಾರಗಳ ಗಡುವು ನೀಡಿದೆ.

"ನಾವು ಎನ್ ಸಿಎಲ್ ಟಿ (ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ) ನೇಮಕಾತಿಗಳನ್ನು ನೋಡಿದ್ದೇವೆ .... ಹೆಚ್ಚಿನ ಶಿಫಾರಸುಗಳನ್ನು ಮಾಡಲಾಗಿದೆ. ಆದರೆ ನೇಮಕಾತಿಗಳಲ್ಲಿ ತನಗೆ ಬೇಕಾದಂತೆ ಆಯ್ಕೆ ಮಾಡಿದಂತೆ ಗೋಚರಿಸುತ್ತಿದೆ. ಇದು ಯಾವ ರೀತಿಯ ಆಯ್ಕೆ ಹಾಗೂ ನೇಮಕಾತಿ ? ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸದಸ್ಯರನ್ನು ಕೂಡ ಹೀಗೆ ಮಾಡಲಾಗಿದೆಯೇ? "ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ವಿಚಾರಣೆ ವೇಳೆ ಹೇಳಿದೆ.

 "ಸರಕಾರವು ಕೆಲವು ಶಿಫಾರಸುಗಳನ್ನು ಅನುಸರಿಸಲು ಅರ್ಹವಾಗಿದೆ" ಎಂದು  ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಉತ್ತರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)