ಸೌದಿ ಅರೇಬಿಯಾ: ಕೊರೋನ ಸೋಂಕಿನ 70 ಹೊಸ ಪ್ರಕರಣ ದಾಖಲು
ರಿಯಾದ್, ಸೆ.19: ಕೊರೋನ ಸೋಂಕಿನಿಂದ ಶನಿವಾರ ಮತ್ತೆ 5 ಮಂದಿ ಮೃತಪಟ್ಟಿದ್ದು 70 ಹೊಸ ಪ್ರಕರಣ ದಾಖಲಾಗಿದೆ ಎಂದು ಸೌದಿ ಅರೆಬಿಯಾ ಘೋಷಿಸಿದೆ.
ಹೊಸ ಪ್ರಕರಣಗಳಲ್ಲಿ 21 ರಿಯಾದ್ನಲ್ಲಿ, 19 ಮಕ್ಕಾದಲ್ಲಿ, ಪೂರ್ವ ಪ್ರಾಂತ್ಯದಲ್ಲಿ 7, ಮದೀನಾದಲ್ಲಿ 6, ಆಸಿರ್ನಲ್ಲಿ 3, ಜಝಾನ್ನಲ್ಲಿ 2, ತಬೂಕ್, ಅಲ್-ಜೌಫ್, ಹೈಲ್ ಮತ್ತು ಅಲ್ಬಹಾದಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಇದೇ ವೇಳೆ ಸೋಂಕಿನಿಂದ 81 ಮಂದಿ ಚೇತರಿಸಿಕೊಂಡಿದ್ದು ಚೇತರಿಸಿಕೊಂಡವರ ಒಟ್ಟು ಸಂಖ್ಯೆ 5,35,531ಕ್ಕೇರಿದೆ. ರವಿವಾರ ಸೋಂಕಿನಿಂದ ಮತ್ತೆ 5 ಮಂದಿ ಮೃತರಾಗಿದ್ದು ಮೃತರ ಒಟ್ಟು ಸಂಖ್ಯೆ 8,661ಕ್ಕೇರಿದೆ . ಇದುವರೆಗೆ 40.6 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ ಎಂದು . ಸೌದಿ ಅರೇಬಿಯಾದ ಅಧಿಕಾರಿಗಳು ಹೇಳಿದ್ದಾರೆ.
Next Story