varthabharthi


ಕರ್ನಾಟಕ

ದಾವಣಗೆರೆ: ಒಂದೇ ಕುಟುಂಬದ ಮೂವರು‌ ಆತ್ಮಹತ್ಯೆ

ವಾರ್ತಾ ಭಾರತಿ : 20 Sep, 2021

ದಾವಣಗೆರೆ: ಒಂದೇ ಕುಟುಂಬದ ಮೂವರು‌ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಭರತ್ ಕಾಲೋನಿಯಲ್ಲಿ ನಡೆದಿದೆ.

ಕೃಷ್ಣ ನಾಯ್ಕ್(35), ಪತ್ನಿ ಸುಮ, ದೃವ (6)ಅತ್ಮಹತ್ಯೆಗೆ ಶರಣಾಗಿದ್ದಾರೆ. 

ಪತ್ನಿ ಹಾಗೂ ಮಗನಿಗೆ ವಿಷ ಕುಡಿಸಿ ಕೃಷ್ಣ ನಾಯ್ಕ್ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್ ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಲಾರಿ ಚಾಲಕರಾಗಿದ್ದ ಕೃಷ್ಣ ನಾಯ್ಕ್, ಪತ್ನಿ ಸುಮಾಗೆ ಆರೋಗ್ಯದ ಸಮಸ್ಯೆ  ಜೊತೆಗೆ ಆರ್ಥಿಕ ಕಷ್ಟಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)