varthabharthi


ರಾಷ್ಟ್ರೀಯ

ಭೀಮಾ ಕೋರೆಗಾಂವ್ ಆರೋಪಿಗಳಿಗೆ ವೈದ್ಯಕೀಯ ಜಾಮೀನು ನಿರಾಕರಿಸಿದ ಎನ್‌ಐಎ ಕೋರ್ಟ್

ವಾರ್ತಾ ಭಾರತಿ : 22 Sep, 2021

ಮುಂಬೈ,ಸೆ.21: ಭೀಮಾ ಕೋರೆಗಾಂವ್ ಗಲಭೆ ಪ್ರಕರಣದ ಆರೋಪಿಗಳಾದ ಶೋಮಾಸೇನ್, ಆನಂದ ತೇಲ್ತುಂಬ್ಡೆ, ಗೌತಮ್ ನವ್ಲಾಖಾ ಹಾಗೂ ವೆರ್ನನ್ ಗೋನ್ಸಾಲ್ವಿಸ್ ಅವರು ವೈದ್ಯಕೀಯ ಕಾರಣಗಳಿಗಾಗಿ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.

ತಾವು ವಿವಿಧ ರೀತಿಯ ಅನಾರೋಗ್ಯಗಳಿಂದ ಬಳಲುತ್ತಿರುವುದರಿಂದ ತಮಗೆ ಜಾಮೀನು ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.

ಕೋವಿಡ್19 ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆಗೊಳಿಸಲು ಸ್ಥಾಪಿಸಲಾದ ಉನ್ನತ ಮಟ್ಟದ ಸಮಿತಿಯ ಶಿಪಾರಸುಗಳ ಆಧಾರದಲ್ಲಿ ಜಾಮೀನುನೀಡಬೇಕೆಂಬ ಆರೋಪಿಗಳ ಮನವಿಯನ್ನು ವಿಶೇಷ ನ್ಯಾಯಾಧೀಶ ಡಿ.ಎ.ಕೋಥಾಲಿಕಾರ್ ತಿರಸ್ಕರಿಸಿದರು.

ಈ ಮಧ್ಯೆ ಇದೇ ನ್ಯಾಯಾಲಯವು, ಭೀಮಾಕೋರೆಂಗಾವ್ ಪ್ರಕರಣದ ಇನ್ನೋರ್ವ ಆರೋಪಿ ರೋನಾ ವಿಲ್ಸನ್ ಅವರಿಗೆ ನೀಡಲಾದ ಮಧ್ಯಂತರ ಜಾಮೀನಿನ ಅವಧಿಯನ್ನು ವಿಸ್ತರಿಸಿದೆ. ನಿಧನರಾದ ತನ್ನ ತಂದೆಯವರ ಸ್ಮರಣಾರ್ಥವಾಗಿ ನಡೆಸುವ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕೇರಳದಲ್ಲಿರುವ ಅವರ ಮನೆಗೆ ತೆರಳಲು ಸೆಪ್ಟೆಂಬರ್ 13ರಿಂದ 27ರವರೆಗೆ ಜಾಮೀನು ಬಿಡುಗಡೆಗೊಂಳಿಸಲು ನ್ಯಾಯಾಲಯ ಆದೇಶ ನಡಿತ್ತು. ಇದೀಗ ಅವರ ಜಾಮೀನು ಬಿಡುಗಡೆಯ ಅವಧಿಯನ್ನು ಸೆಪ್ಟೆಂಬರ್ 30ರೊಳಗೆ ವಿಸ್ತರಿಸಲಾಗಿದೆ.

69 ವರ್ಷ ವಯ್ಸಿನ ವೆರ್ನನ್ ಗೋನ್ಸಾಲ್ವಿಸ್ ಅವರು ಬರಹಗಾರ ಹಾಗೂ ಅಂಕಣಕಾರರಾಗಿದ್ದು, ಅಧಿಕ ರಕ್ತದೊತ್ತಡ ಹಾಗೂ ಪೈಲ್ಸ್‌ನಿಂದ ಬಳಲುತ್ತಿದ್ದಾರೆ. 67 ವರ್ಷದ ನವ್ಲಾಖಾ ಅವರು ನಾಗರಿಕ ಹಕ್ಕುಗಳ ವಿಧ್ವಾಂಸ ಹಾಗೂ ಪತ್ರಕರ್ತರಾಗದ್ದು, ಕೊಲೋನಿಕ್ ಪೊಲಿಪೊಸಿಸ್, ಗ್ಯಾಸ್ಟ್ರಿಟಿಸ್ ಹಾಗೂ ಅಧಿಕರಕ್ತದೊತ್ತಡದ ಸಮಸ್ಯೆಯನ್ನು ಎದುರಿಸುತ್ತಿದಾರೆ. ಗೋನ್ಸಾಲ್ವಿಸ್, ನವ್ಲಾಖಾ ಹಾಗೂ ರೋನಾ ವಿಲ್ಸನ್ ಇವರೆಲ್ಲರೂ ತಲೋಜಾ ಸೆಂಟ್ರಲ್ ಜೈಲಿನಲ್ಲಿಡಲಾಗಿದೆ.

63 ವರ್ಷ ವಯಸ್ಸಿನ ಪ್ರೊ. ಶೋಮಾ ಸೇನ್ ಅವರು ನಾಗಪುರ ವಿವಿಯ ಆಂಗ್ಲ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದಾರೆ. ಅವರು ಅಸ್ಟ್ರೆರೊ ಅರ್ಥರೈಟಿಸ್, ಗ್ಲುಕೋಮಾ ಹಾಗೂ ಅಧಿಕ ರಕ್ತದೊತ್ತಡದಿಂದ ಬಾಧಿತರಾಗಿದ್ದಾರೆ. ಅವರನ್ನು 2018ರ ಜೂನ್ 6ರಂದು ಬಂಧಿಸಲಾಗಿದ್ದು, ಬೈಕುಲಾ ಸೆಂಟ್ರಲ್ ಜೈಲಿನಲ್ಲಿರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)