varthabharthi


ಕರಾವಳಿ

ದ.ಕ. ಯುವ ಕಾಂಗ್ರೆಸ್ ಪ್ರ. ಕಾರ್ಯದರ್ಶಿಯಾಗಿ ಹಾಶೀರ್, ವೈಭವ್ ಶೆಟ್ಟಿ, ಇರ್ಷಾದ್ ನೇಮಕ

ವಾರ್ತಾ ಭಾರತಿ : 22 Sep, 2021

ಹಾಶೀರ್ ಪೇರಿಮಾರ್ /  ವೈಭವ್ ಶೆಟ್ಟಿ ನಾರ್ಲ / ಇರ್ಷಾದ್ ಗುಡ್ಡೆಅಂಗಡಿ

ಬಂಟ್ವಾಳ, ಸೆ.22: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ವೈಭವ್ ಶೆಟ್ಟಿ ನಾರ್ಲ ಹಾಗೂ ಇರ್ಷಾದ್ ಗುಡ್ಡೆಅಂಗಡಿ ಅವರು ನೇಮಕಗೊಂಡಿದ್ದಾರೆ.

ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರ ಶಿಫಾರಸಿನಂತೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ಅವರು ಹಾಶೀರ್ ಪೇರಿಮಾರ್ ಮತ್ತು ವೈಭವ್ ಶೆಟ್ಟಿ ನಾರ್ಲ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಶಿಫಾರಸಿನ ಮೇರೆಗೆ ಇರ್ಷಾದ್ ಗುಡ್ಡೆಅಂಗಡಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಇವರು ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಯು.ಟಿ.ಕೆ. ಕೋವಿಡ್-19 ಹೆಲ್ಪ್ ಲೈನ್ ತಂಡದಲ್ಲಿ ಮತ್ತು ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ರಾಜಕೀಯದ ಜೊತೆ ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ ಗುರುತಿಸಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)