ಐಪಿಎಲ್:ಸನ್ ರೈಸರ್ಸ್ ಗೆ 126 ರನ್ ಗುರಿ ನೀಡಿದ ಪಂಜಾಬ್ ಕಿಂಗ್ಸ್
photo: twitter.com/IPL
ಶಾರ್ಜಾ: ವೇಗದ ಬೌಲರ್ ಜೇಸನ್ ಹೋಲ್ಡರ್(3-19) ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಪರ ಯಾವೊಬ್ಬ ಬ್ಯಾಟ್ಸ್ ಮನ್ ದಿಟ್ಟ ಪ್ರದರ್ಶನ ನೀಡಲಿಲ್ಲ. ಏಡೆನ್ ಮರ್ಕರಮ್ 27 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಆರಂಭಿಕ ಬ್ಯಾಟ್ಸ್ ಮನ್ ಹಾಗೂ ನಾಯಕ ಕೆ.ಎಲ್.ರಾಹುಲ್ (21), ಹರ್ಪೀತ್ ಬ್ರಾರ್(ಔಟಾಗದೆ 18), ಕ್ರಿಸ್ ಗೇಲ್(14), ದೀಪಕ್ ಹೂಡ(13), ನಥಾನ್ ಎಲ್ಲಿಸ್(12) ಎರಡಂಕೆಯ ಸ್ಕೋರ್ ಗಳಿಸಿದರು.
ಹೋಲ್ಡರ್ 4 ಓವರ್ ಗಳಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್ ಪಡೆದರು. ಅಬ್ದುಲ್ ಸಮದ್(1-9), ರಶೀದ್ ಖಾನ್(1-17), ಸಂದೀಪ್ ಶರ್ಮಾ(1-20), ಭುವನೇಶ್ವರ ಕುಮಾರ್(1-34) ತಲಾ ಒಂದು ವಿಕೆಟ್ ಪಡೆದರು.
Next Story