ಆರ್ ಸಿಬಿ ವಿರುದ್ಧ ಮುಗ್ಗರಿಸಿದ ಮುಂಬೈ ಇಂಡಿಯನ್ಸ್
ಹರ್ಷಲ್ ಪಟೇಲ್ ಗೆ ಹ್ಯಾಟ್ರಿಕ್ ವಿಕೆಟ್
photo: twitter.com/IPL
ದುಬೈ, ಸೆ.26: ಹರ್ಷಲ್ ಪಟೇಲ್(4-17) ಹ್ಯಾಟ್ರಿಕ್ ವಿಕೆಟ್ ಹಾಗೂ ಯಜುವೇಂದ್ರ ಚಹಾಲ್(3-11) ಸ್ಪಿನ್ ಮೋಡಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 54 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
ರವಿವಾರ ನಡೆದ ಐಪಿಎಲ್ ನ 39ನೇ ಪಂದ್ಯದಲ್ಲಿ ಗೆಲ್ಲಲು 166 ರನ್ ಗುರಿ ಪಡೆದ ಮುಂಬೈ 18.1 ಓವರ್ ಗಳಲ್ಲಿ ಕೇವಲ 111 ರನ್ ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಮುಂಬೈ ಪರ ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ(43, 28 ಎಸೆತ) ಏಕಾಂಗಿ ಹೋರಾಟ ನೀಡಿದರು. ಕ್ವಿಂಟನ್ ಡಿಕಾಕ್ (24) ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಪೆವಿಲಿಯನ್ ಗೆ ಪರೇಡ್ ನಡೆಸಿದರು. ಆಲ್ ರೌಂಡರ್ ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲೂ(2-23)ಮಿಂಚುವ ಮೂಲಕ ಆಲ್ ರೌಂಡ್ ಪ್ರದರ್ಶನ ನೀಡಿದರು.
Next Story