varthabharthi


ರಾಷ್ಟ್ರೀಯ

ಸಹೋದ್ಯೋಗಿ ಮೇಲೆ ಅತ್ಯಾಚಾರ: ವಾಯುಪಡೆ ಅಧಿಕಾರಿ ಬಂಧನ

ವಾರ್ತಾ ಭಾರತಿ : 27 Sep, 2021

ಚೆನ್ನೈ: ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವಾಯುಪಡೆಯ ಅಧಿಕಾರಿಯೊಬ್ಬರನ್ನು ಕೊಯಮತ್ತೂರಿನಲ್ಲಿ ರವಿವಾರ ಬಂಧಿಸಲಾಗಿದೆ.

ಹತ್ತು ದಿನಗಳ ಹಿಂದೆ ಈ ಅತ್ಯಾಚಾರ ಘಟನೆ ನಡೆದಿದ್ದಾಗಿ ಆಪಾದಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ದಮೋನ್ ಈ ಬಂಧನವನ್ನು ಖಚಿತಪಡಿಸಿದ್ದು, ನಿನ್ನೆ ಸಂಜೆ ವಾಯುಪಡೆಯ ಅಧಿಕಾರಿಯನ್ನು ಬಂಧಿಸಲಾಗಿದ್ದು, ಎರಡು ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಂಧಿತ ಆರೋಪಿಯನ್ನು 29 ವರ್ಷ ವಯಸ್ಸಿನ ಫ್ಲೈಟ್ ಲೆಫ್ಟಿನೆಂಟ್ ಎಂದು ಗುರುತಿಸಲಾಗಿದ್ದು, ಈತ ರೇಸ್‌ಕೋರ್ಸ್ ಸಮೀಪದ ವಾಯುಪಡೆ ಸೌಲಭ್ಯದಲ್ಲಿ ತರಬೇತಿ ಪಡೆಯುವ ಸಲುವಾಗಿ ಛತ್ತೀಸ್‌ಗಢದಿಂದ ಆಗಮಿಸಿದ್ದ ಎನ್ನಲಾಗಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 376ರ ಅನ್ವಯ ಲೈಂಗಿಕ ಹಲ್ಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)