varthabharthi


ರಾಷ್ಟ್ರೀಯ

ತೃಣಮೂಲ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಗೋವಾ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೊ ಫಲೆರೊ ರಾಜೀನಾಮೆ

ವಾರ್ತಾ ಭಾರತಿ : 27 Sep, 2021

ಪಣಜಿ: ಗೋವಾದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೊ ಫಲೆರೊ  ಕಾಂಗ್ರೆಸ್ ನೊಂದಿಗಿನ 40 ವರ್ಷಗಳ ನಂಟನ್ನು ಇಂದು ಕಳೆದುಕೊಂಡಿದ್ದಾರೆ.  ಅವರು ಮಮತಾ ಬ್ಯಾನರ್ಜಿ ನೇತೃತ್ವದ  ತೃಣಮೂಲ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎನ್ನಲಾಗಿದೆ.

ಇಂದು ಫಲೆರೊ ಅವರು ಬಂಗಾಳ ಮುಖ್ಯಮಂತ್ರಿಯನ್ನು ಹೊಗಳಿದರು.  ಮಮತಾ  ಹೋರಾಟಗಾರ್ತಿ ಹಾಗೂ  ಅವರು ಬಿಜೆಪಿಗೆ ಕಠಿಣ ಹೋರಾಟ ನೀಡಬಲ್ಲರು ಎಂದಿದ್ದಾರೆ.

"ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರಿಗೆ ಕಠಿಣ ಹೋರಾಟ ನೀಡಿದ್ದಾರೆ. ಮಮತಾ ಸೂತ್ರವು ಬಂಗಾಳದಲ್ಲಿ ಗೆದ್ದಿದೆ" ಎಂದು ಫಲೆರೊ ಸುದ್ದಿಗಾರರಿಗೆ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)