ಇಂದಿನಿಂದ ಬಿಎಂಟಿಸಿ ಮಾಸಿಕ ಪಾಸುಗಳ ವಿತರಣೆ
ಬೆಂಗಳೂರು, ಸೆ.27: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ರಿಯಾಯಿತಿ ದರದಲ್ಲಿ ಅಕ್ಟೋಬರ್ ತಿಂಗಳ ಮಾಸಿಕ ಪಾಸುಗಳನ್ನು ಸೆ.28ರಿಂದ ವಿತರಣೆ ಮಾಡಲಾಗುತ್ತಿದೆ. ಮಾಸಿಕ ಪಾಸುಗಳಲ್ಲಿ ಪ್ರಯಾಣಿಕರು ಸಂಸ್ಥೆಯ ಬಸ್ಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಬಹುದಾಗಿರುತ್ತದೆ. ಪಾಸುಗಳನ್ನು ಸಂಸ್ಥೆಯ ಟಿಟಿಎಂಸಿ ಬಸ್ ನಿಲ್ದಾಣಗಳಲ್ಲಿ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
Next Story