ಎಸಿಬಿ ಬಲೆಗೆ ಬಿದ್ದ ಪಂಚಾಯಿತಿ ಬಿಲ್ ಕಲೆಕ್ಟರ್
ಬೆಳಗಾವಿ, ಸೆ.27: ಹುಕ್ಕೇರಿ ತಾಲೂಕಿನ ಗುಡಸ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಸಿದ್ದಗೌಡ ಬಸವಣ್ಣಿ ನೇರ್ಲಿ ಅವರನ್ನು ಎಸಿಬಿ ಪೊಲೀಸರು ಬಂದಿಸಿದ್ದಾರೆ.
ಅದೇ ಗ್ರಾಮದ ನಿವಾಸಿಯೊಬ್ಬರು ತನ್ನ ತಂದೆಯ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಪರಿವರ್ತಿಸಿಕೊಳ್ಳಲು ಗ್ರಾಮ ಪಂಚಾಯಿತಿಗೆ ಹೋಗಿದ್ದರು. ಬಿಲ್ ಕಲೆಕ್ಟರ್ ಸಿದ್ದಗೌಡ ಬಸವಣ್ಣಿ ನೇರ್ಲಿ ಅವರು ರೂ.7,400 ಹಣವನ್ನು ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ಗ್ರಾಮದ ನಿವಾಸಿ ಎಸಿಬಿಗೆ ದೂರು ನೀಡಿದ್ದನು. ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದಾಗ ಬಿಲ್ ಕಲೆಕ್ಟರ್ನನ್ನು ಬಂಧಿಸಿದ್ದಾರೆ.
Next Story