varthabharthi


ರಾಷ್ಟ್ರೀಯ

​ಯೂಟ್ಯೂಬ್ ವೀಡಿಯೊ ನೋಡಿ ಗರ್ಭಪಾತಕ್ಕೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ ಗಂಭೀರ

ವಾರ್ತಾ ಭಾರತಿ : 28 Sep, 2021

ಸಾಂದರ್ಭಿಕ ಚಿತ್ರ (Source: PTI)

ನಾಗ್ಪುರ, ಸೆ.28: ಸುಮಾರು 25 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯೊಬ್ಬರು ಯೂಟ್ಯೂಬ್ ವೀಡಿಯೊ ನೋಡಿ ಗರ್ಭಪಾತಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆಯ ದೇಹಸ್ಥಿತಿ ಕ್ಷೀಣಿಸಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯ ಮೇಲೆ ಅತ್ಯಾಚಾರ ಮತ್ತು ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ.

ನಾಗ್ಪುರ ನಗರದ ಯಶೋಧರ ನಗರ ಎಂಬಲ್ಲಿ ಈ ಘಟನೆ ನಡೆದಿದೆ. ವಿವಾಹವಾಗುವುದಾಗಿ ನಂಬಿಸಿ ಶೋಯೆಬ್ ಖಾನ್ (30) ಎಂಬಾತ 2016ರಿಂದಲೂ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಗರ್ಭಿಣಿಯಾದ ವಿಷಯ ತಿಳಿದ ಬಳಿಕ ಯೂಟ್ಯೂಬ್ ವೀಡಿಯೊ ನೋಡಿ ಗರ್ಭಪಾತ ಮಾಡಿಕೊಳ್ಳುವಂತೆ ಸೂಚಿಸಿದ ಹಾಗೂ ಅದರಲ್ಲಿ ಹೇಳಲಾದ ಔಷಧಿಗಳನ್ನು ಸೇವಿಸುವಂತೆ ಸಲಹೆ ಮಾಡಿದ್ದ ಎನ್ನಲಾಗಿದೆ.

"ಮಹಿಳೆ ಸ್ವತಃ ಗರ್ಭಪಾತ ಪ್ರಕ್ರಿಯೆಯನ್ನು ಮಾಡಿಕೊಳ್ಳಲು ಮುಂದಾದಾಗ ಮಹಿಳೆಯ ದೇಹಸ್ಥಿತಿ ವಿಷಮಿಸಿತು. ತಕ್ಷಣ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಆರೋಪಿ ಶೋಯೆಬ್ ಖಾನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)