varthabharthi


ರಾಷ್ಟ್ರೀಯ

ಗ್ರಾಹಕರಿಗೆ ಬರೆ: ಪೆಟ್ರೋಲ್-ಡೀಸೆಲ್‌ ದರದಲ್ಲಿ ಮತ್ತೆ ಏರಿಕೆ !

ವಾರ್ತಾ ಭಾರತಿ : 28 Sep, 2021

ಹೊಸದಿಲ್ಲಿ: ಈಗಾಗಲೇ ನೂರರ ಗಡಿ ದಾಟಿ ಮುನ್ನುಗ್ಗುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಜಾಗತಿಕ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣದಿಂದ ಮಂಗಳವಾರ ಇಂಧನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು indiatoday ವರದಿ ಮಾಡಿದೆ. ಪೆಟ್ರೋ ದರದಲ್ಲಿ 19-25 ಪೈಸೆ ಹೆಚ್ಚಳ ಹಾಗೂ ಡೀಸೆಲ್‌ 24-27 ಪೈಸೆ ಹೆಚ್ಚಳ ಮಾಡಲಾಗಿದೆ.

ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆಯು 20 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್‌ ಗೆ 101.39ರೂ. ಹಾಗೂ ಮುಂಬೈನಲ್ಲಿ 21 ಪೈಸೆ ಏರಿಕೆಯಾಗಿದ್ದು, ಪ್ರತೀ ಲೀಟರ್‌ ಗೆ 107.47 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ನಿನ್ನೆಗಿಂತ 25 ಪೈಸೆ ಹೆಚ್ಚಳಗೊಂಡಿದೆ. ಚೆನ್ನೈನಲ್ಲಿ 99.15 ರೂ,ಗೆ ಪೆಟ್ರೋಲ್‌ ಮಾರಾಟವಾಗುತ್ತಿದೆ.

ಮತ್ತೊಂದೆಡೆ, ರಾಷ್ಟ್ರೀಯ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 89.57 ರೂ.ಗೆ ಏರಿಕೆಯಾಗಿದೆ, ಇದು ನಿನ್ನೆಗಿಂತ 25 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ 27 ಪೈಸೆ ಏರಿಕೆಯ ನಂತರ ಪ್ರತಿ ಲೀಟರ್‌ಗೆ ರೂ 97 ದಾಟಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್‌ಗೆ ರೂ 92.67 ಮತ್ತು ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ 94.17 ರೂ.ಯಂತೆ ಮಾರಾಟ ಮಾಡಲಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)