ಬೆಂಗಳೂರು; ಬೇಕರಿ ತರಬೇತಿ
ಬೆಂಗಳೂರು, ಸೆ. 29: ಬೇಕರಿ ತರಬೇತಿ ಘಟಕದ ವತಿಯಿಂದ ನಾಲ್ಕು ವಾರಗಳ ಬೇಕರಿ ತರಬೇತಿ ಕಾರ್ಯಕ್ರಮವನ್ನು ಆಸಕ್ತಿಯುಳ್ಳ ಬೇಕರಿದಾರರಿಗೆ ಉದ್ದಿಮೆ ಮತ್ತು ಗೃಹಿಣಿಯರಿಗಾಗಿ ಆಯೋಜಿಸಲಾಗಿದೆ.
ಬೇಕರಿ ತರಬೇತಿಯು ದಿನಾಂಕ ಅ.4ರಿಂದ ಪ್ರಾರಂಭವಾಗಲಿದೆ. ಈ ತರಬೇತಿಯಲ್ಲಿ ಬ್ರೆಡ್, ಬನ್, ಪಪ್ಸ್, ಕೇಕ್‍ಗಳು, ವಿಶೇಷ ಬಿಸ್ಕತ್ತುಗಳು, ರೋಲ್ಸ್ಗಳು ಮತ್ತಿತರ ಆಕರ್ಷಕ ಬೇಕರಿ ಪದಾರ್ಥಗಳನ್ನು ಕಲಿಸಲಾಗುವುದು. ಅಭ್ಯರ್ಥಿಗಳು ಸ್ವತಃ ಪದಾರ್ಥ ತಯಾರಿಸುವ ಮೂಲಕ ಕಲಿಯುವ ಸೌಲಭ್ಯವಿದೆ ಎಂದು ತಿಳಿಸಲಾಗಿದೆ.
ಯಾವುದೇ ವಿದ್ಯಾರ್ಹತೆ ಅವಶ್ಯಕತೆಯಿಲ್ಲ. ತಯಾರಿಕೆಗೆ ಬೇಕಾದ ಕಚ್ಛಾ ಪದಾರ್ಥಗಳನ್ನು ತರಬೇತಿ ಘಟಕದಲ್ಲೇ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560 024, ಇವರನ್ನು ಖುದ್ದಾಗಿ ಅಥವಾ ದೂ.ಸಂಖ್ಯೆ 2351 3370 ಮೂಲಕ ಕಚೇರಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Next Story