ಸ್ವಾತಂತ್ರ್ಯವನ್ನು ಸಂರಕ್ಷಿಸಲು ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕು: ಕನ್ಹಯ್ಯ ಕುಮಾರ್
ಹೊಸದಿಲ್ಲಿ: ಬಿಜೆಪಿಯನ್ನು ಯಾವುದೇ ಚುನಾವಣೆಯಲ್ಲಿ ಸೋಲಿಸಬಹುದಾಗಿದೆ, ಎಂದು ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾಜಿ ಜೆಎನ್‍ಯು ವಿದ್ಯಾರ್ಥಿ ನಾಯಕ ಕನಯ್ಯಾ ಕುಮಾರ್ ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು "ಬಿಜೆಪಿ ನನ್ನನ್ನು ಟುಕ್ಡೆ ಟುಕ್ಡೆ ಗ್ಯಾಂಗ್ ಎಂದು ಕರೆಯುತ್ತದೆ, ಬಿಜೆಪಿಗೆ ನಾನು ಟುಕ್ಡೆ ಟುಕ್ಡೆ, ನಾನು ಬಿಜೆಪಿಯನ್ನು ಟುಕ್ಡೆ ಟುಕ್ಡೆ ಮಾಡುತ್ತೇನೆ" ಎಂದು ಹೇಳಿದರು.
ಮಹಾತ್ಮ ಗಾಂಧಿಯ ಹತ್ಯೆಗೈದ ನಾಥೂರಾಂ ಗೋಡ್ಸೆಯನ್ನು ತನ್ನ ತಂದೆ ಎಂದು ಬಿಜೆಪಿ ಪರಿಗಣಿಸುತ್ತಿದೆ ಮತ್ತು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ "ನಾಥೂರಾಂ-ಬನಿ ಜೋಡಿ (ನಾಥೂರಾಂ ಮಾಡಿದ ಜೋಡಿ)" ಎಂದು ಕನಯ್ಯಾ ಹೇಳಿದರು.
"ರಾಷ್ಟ್ರಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ವಿಪಕ್ಷ ಕಾಂಗ್ರೆಸ್ ಆಗಿದೆ. ಅವರನ್ನು (ಬಿಜೆಪಿ) ಸೋಲಿಸಲು ಸಾಧ್ಯವಿಲ್ಲ ಎಂದು ನಾನು ತಿಳಿದಿದ್ದರೆ ಹೋರಾಟ ಕೈಬಿಡುತ್ತಿದ್ದೆ. ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ಪ್ರಮುಖ ಪಾತ್ರವನ್ನು ಕಾಂಗ್ರೆಸ್ ವಹಿಸಿತ್ತು, ಸ್ವಾತಂತ್ರ್ಯವನ್ನು ಸಂರಕ್ಷಿಸಲು ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕು" ಎಂದು ಅವರು ಹೇಳಿದರು.