ಸೌದಿ ಅರೇಬಿಯಾ: 2 ಡೋಸ್ ಲಸಿಕೆ ಕಡ್ಡಾಯದ ಹೊಸ ನೀತಿ ಜಾರಿ
ರಿಯಾದ್, ಅ.2: ಸೌದಿ ಅರೆಬಿಯಾದಲ್ಲಿ ವಿಮಾನ ಅಥವಾ ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವವರು ಅನುಮೋದಿತ ಕೋವಿಡ್-19 ಸೋಂಕಿನ 2 ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂಬ ನಿಯಮವನ್ನು ಜಾರಿಗೊಳಿಸಿರುವುದಾಗಿ ಸೌದಿ ಅರೆಬಿಯಾದ ಒಳಾಡಳಿತ ಇಲಾಖೆ ಶುಕ್ರವಾರ ಹೇಳಿದೆ.
ಹೊಸ ನಿಯಮ ಅಕ್ಟೋಬರ್ 10ರಿಂದ ಜಾರಿಗೆ ಬರಲಿದೆ. ಯಾವುದೇ ಸಾಂಸ್ಕತಿಕ, ವೈಜ್ಞಾನಿಕ, ಸಾಮಾಜಿಕ ಅಥವಾ ಮನೋರಂಜನಾತ್ಮಕ ಕಾರ್ಯಕ್ರಮಗಳಿಗೂ ಈ ನಿಯಮವನ್ನು ವಿಸ್ತರಿಸಲಾಗುವುದು . 2 ಲಸಿಕೆ ಪಡೆಯವದವರಿಗೆ ಯಾವುದೇ ಆರ್ಥಿಕ, ವಾಣಿಜ್ಯ, ಸಾಂಸ್ಕತಿಕ, ಮನೋರಂಜನಾತ್ಮಕ, ಕ್ರೀಡಾಕೂಟ ಅಥವಾ ಪ್ರವಾಸೋದ್ಯಮ ಚಟುವಟಕೆಗಳಿಗೆ ಪ್ರವೇಶಾವಕಾಶ ನಿರಾಕರಿಸಲಾಗುವುದು. ಜೊತೆಗೆ, ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಸೌದಿ ಅರೆಬಿಯಾದಲ್ಲಿ ಶುಕ್ರವಾರ ಕೊರೋನ ಸೋಂಕಿನಿಂದ 3 ಮಂದಿ ಮೃತಪಟ್ಟಿದ್ದು 45 ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,719 ಮತ್ತು ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 5,36,226ಕ್ಕೇರಿದೆ ಎಂದು ಇಲಾಖೆ ಹೇಳಿದೆ.