ಸೌದಿ ಅರೇಬಿಯಾದ ವಿಮಾನ ನಿಲ್ದಾಣಕ್ಕೆ ಡ್ರೋನ್ ದಾಳಿ, 10 ಮಂದಿಗೆ ಗಾಯ: ವರದಿ
Photo: Reuters
ಜಿಝಾನ್: ಸೌದಿ ಅರೇಬಿಯಾದ ದಕ್ಷಿಣ ನಗರವಾದ ಜಿಝಾನ್ ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ತುಂಬಿದ ಡ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ (ಎಸ್ಪಿಎ) ಹೇಳಿದೆ.
ಆರು ಮಂದಿ ಸೌದಿ ಅರೇಬಿಯಾ ಪ್ರಜೆಗಳು, ಮೂವರು ಬಾಂಗ್ಲಾದೇಶಿ ಪ್ರಜೆಗಳು ಹಾಗೂ ಒಬ್ಬ ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ. ದಾಳಿಯ ತೀವ್ರತೆಗೆ ವಿಮಾನ ನಿಲ್ದಾಣದ ಮುಂಭಾಗದ ಕೆಲ ಕಿಟಕಿಗಳು ಛಿದ್ರಗೊಂಡಿದೆ ಎಂದು ಒಕ್ಕೂಟದ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಹೌತಿ ಬಂಡುಕೋರರು ತಕ್ಷಣದ ಹೊಣೆ ಹೊತ್ತುಕೊಂಡಿಲ್ಲ ಎನ್ನಲಾಗಿದೆ. ಆದರೆ ಈ ಬಂಡಾಯ ಗುಂಪು ನಿಯಮಿತವಾಗಿ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುತ್ತದೆ.
Next Story