varthabharthi


ಕರ್ನಾಟಕ

ಆಳ್ವಾಸ್ ವಿದ್ಯಾರ್ಥಿ ಗ್ರೀಷ್ಮಾ ನಾಯಕ್ ರಾಜ್ಯಕ್ಕೆ ಪ್ರಥಮ, ಕಲಬುರಗಿಯ ಶಾನವಾಝ್ ದ್ವಿತೀಯ

ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ವಾರ್ತಾ ಭಾರತಿ : 11 Oct, 2021

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

► ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ

ಬೆಂಗಳೂರು, ಅ.11: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನಡೆದಿದ್ದ ಎಸೆಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡ 55.54ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

ಸೋಮವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು  ಫಲಿತಾಂಶವನ್ನು ಪ್ರಕಟಿಸಿದರು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಪೂರಕ ಪರೀಕ್ಷೆಗೆ 53,155 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅದರಲ್ಲಿ 29,522 ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 30,398 ವಿದ್ಯಾರ್ಥಿಗಳ ಪೈಕಿ 18,554 ಉತ್ತೀರ್ಣರಾಗುವ ಮೂಲಕ ಶೇ. 61.04 ಫಲಿತಾಂಶ ಬಂದಿದೆ.
ಅದೇ ರೀತಿ, ನಗರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 22,757 ವಿದ್ಯಾರ್ಥಿಗಳ ಪೈಕಿ 10,968 ಮಂದಿ ಉತ್ತೀರ್ಣರಾಗಿದ್ದು, ಶೇಕಕವಾರು 48.2 ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಈ ಪರೀಕ್ಷೆಯಲ್ಲಿ 35,182 ಬಾಲಕರು ಹಾಜರಾಗಿದ್ದು, ಈ ಪೈಕಿ 19,232 ಬಾಲಕರು ಉತ್ತೀರ್ಣರಾಗಿ, ಶೇಕಡ 54.66 ಫಲಿತಾಂಶ ಬಂದಿದೆ. 17,973 ಬಾಲಕಿಯರ ಪೈಕಿ 10,290 ಬಾಲಕಿಯರು ಉತ್ತೀರ್ಣರಾಗಿದ್ದು, ಒಟ್ಟು ಶೇ.57.25 ಫಲಿತಾಂಶ ಬಂದಿದೆ ಎಂದು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 42,971 ಪೈಕಿ 24,929 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟು ಶೇ. 58.01ರಷ್ಟು ಫಲಿತಾಂಶ ಬಂದಿದೆ. ಇಂಗ್ಲಿμï ಮಾಧ್ಯಮದ 6,622 ವಿದ್ಯಾರ್ಥಿಗಳ ಪೈಕಿ 2,744 ಮಂದಿ ಉತ್ತೀರ್ಣರಾಗಿದ್ದು, ಶೇ. 41.44 ಫಲಿತಾಂಶ ಹೊರಬಿದ್ದಿದೆ.
ಉರ್ದು ಮಾಧ್ಯಮದ 2,673 ವಿದ್ಯಾರ್ಥಿಗಳಲ್ಲಿ 1,390 ಮಂದಿ ಉತ್ತೀರ್ಣರಾಗಿದ್ದು, ಶೇ.52ರಷ್ಟು ಫಲಿತಾಂಶ ಬಂದಿದೆ ಎಂದು ನಾಗೇಶ್ ವಿವರಿಸಿದರು.

ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಪೈಕಿಯೂ ಒಳ್ಳೆಯ ಫಲಿತಾಂಶ ಬಂದಿದ್ದು, ಈ ವಿಭಾಗದಲ್ಲಿ ಒಟ್ಟು 3,232 ಶಾಲೆಗಳ ಪೈಕಿ 27,313 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15,855 ಮಂದಿ ಉತ್ತೀರ್ಣರಾಗಿದ್ದಾರೆ. ಹಾಗೆಯೇ ಶೇಕಡಾ 58.05 ರಷ್ಟು ಫಲಿತಾಂಶ ಬಂದಿದೆ ಎಂದರು.

ಸೆ.27 ಮತ್ತು 29ರಂದು ಎಸೆಸೆಲ್ಸಿ ಪೂರಕ ಪರೀಕ್ಷೆ ನಡೆದಿದ್ದು, ಸುಮಾರು 53 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಸರಳೀಕೃತ ಮಾದರಿಯಲ್ಲಿ ಒಂದು ದಿನ ಕೋರ್ ವಿಷಯಗಳಿಗೆ ಹಾಗೂ ಮತ್ತೊಂದು ದಿನ ಭಾμÁ ವಿಷಯಕ್ಕೆ ಪರೀಕ್ಷೆ ನಡೆದಿತ್ತು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ಸೇರಿದಂತೆ ಪ್ರಮುಖರಿದ್ದರು.

ಕರ್ನಾಟಕ ಸರ್ಕಾರದ ಅಧಿಕೃತ ವೆಬ್​ಸೈಟ್ https://sslc.karnataka.gov.in ನಲ್ಲಿ ಫಲಿತಾಂಶ ಲಭ್ಯವಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್​ ನಂಬರ್​ಗೆ ಎಸ್​ಎಂಎಸ್​ ಮೂಲಕ ಫಲಿತಾಂಶ ಬರಲಿದೆ.

ಪ್ರಥಮ-ದ್ವಿತೀಯ

ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ.

ಅದೇ ರೀತಿ, ಕಲಬುರಗಿ ಜಿಲ್ಲೆಯ ಗ್ರಮರ್ ಮಲ್ಟಿ ಮೀಡಿಯಾ ಇಎಂಹೆಚ್ಎಸ್ ಶಾಲೆಯ ಮುಹಮ್ಮದ್ ಶಾನವಾಝ್ ರಾಜ್ಯಕ್ಕೆ  ದ್ವಿತೀಯ ಸ್ಥಾನ ಗಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)