ದುಬೈ: ಕರ್ನಾಟಕ ಸಂಘ ಶಾರ್ಜಾ ವತಿಯಿಂದ ರಕ್ತದಾನ ಶಿಬಿರ
ದುಬೈ: 'ಕರ್ನಾಟಕ ಸಂಘ ಶಾರ್ಜಾ' ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಶುಕ್ರವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕನ್ನಡಿಗರು ಮಾತ್ರವಲ್ಲದೆ ಕನ್ನಡೇತರ, ಪಂಜಾಬ್, ಮಹಾರಾಷ್ಟ್ರ ಇತರ ರಾಜ್ಯಗಳ ಯುಎಇ ಅನಿವಾಸಿ ಭಾರತೀಯರೂ, ಎಲ್ಲಾ ಜಾತಿ, ಪಂಗಡ, ವರ್ಗದ ಭಾರತೀಯರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಯೂನಿಕ್ಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಇಹ್ಸಾನ್ ಶೇಕ್, ಸರ್ವೋತಮ ಶೆಟ್ಟಿ, ಅಲ್ ಹಾಜ್ ತಾಹಾ ಬಾಫಖಿ ತಂಙಳ್ , ವಾಸು ಶೆಟ್ಟಿ , ಡಾ. ಕಾಪು ಮೊಹಮ್ಮದ್ , ಹಿದಾಯತ್ ಅಡ್ಡೂರು, ಅಬ್ದುಲ್ ಲತೀಫ್ ಮುಲ್ಕಿ, ಹರೀಶ್ ಕೊಡಿ ಮೊದಲಾದ ಗಣ್ಯರು ಭಾಗವಹಿಸಿದರು.
ರಕ್ತದಾನ ಶಿಬಿರವು ಅಂದು ಬೆಳಗ್ಗೆ ಸುಮಾರು 10 ಘಂಟೆಯಿಂದ ಮಧ್ಯಾಹ್ನ 12 ಘಂಟೆಯ ವರೆಗೆ ನಿಗದಿಯಾಗಿದ್ದ ಕಾರ್ಯಕ್ರಮವು ರಕ್ತದಾನ ಮಾಡಲು ಆಸಕ್ತಿ ತೋರಿದವರ ಸಂಖ್ಯೆ ನಿರೀಕ್ಷೆಗೂ ಮೀರಿದುದರಿಂದ ಕಾರ್ಯಕ್ರಮದ ನಿಗದಿತ ಸಮಯದ ನಂತರವೂ ಅಂದರೆ ಸುಮಾರು ಮಧ್ಯಾಹ್ನ 2 ಘಂಟೆಯ ವರೆಗೆ ಮುಂದುವರಿಸಲಾಯಿತು.
ಕರ್ನಾಟಕ ಸಂಘ ಶಾರ್ಜಾ ಇದರ ಅಧ್ಯಕ್ಷರಾದ ಎಂಈ ಮೂಳೂರು ಅವರ ನೇತೃತ್ವದಲ್ಲಿ ಸಂಘದ ಪ್ರಧಾನ ಸಲಹೆಗಾರರೂ, ಕೆಎನ್ಆರ್ ಐ ಅಧ್ಯಕ್ಷರೂ, ಫಾರ್ಚ್ಯೂನ್ ಗ್ರೂಪ್ ಹೋಟೆಲ್ ಇದರ ಮಾಲಕರೂ ಆದ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್ (ಮ್ಯಾನೇಜಿಂಗ್ ಡೈರೆಕ್ಟರ್ ಅಸಿಮ್ ಆ್ಯಂಡ್ ಗಲ್ಫ್ ಕನ್ನಡಿಗ ಡಾಟ್ ಕಾಮ್ ಇದರ ಮಾಲಕರು) ಉಪಾಧ್ಯಕ್ಷರಾದ ನಾವೆಲ್ ಅಲ್ಮೇಡಾ, ಕಾರ್ಯದರ್ಶಿ ನಿಶ್ವನಾಥ್ ಶೆಟ್ಟಿ, ಸಲಹೆಗಾರರಾದ ಗಣೇಶ್ ರೈ, ಸುಗಂದ್ ರಾಜ್ ಬೇಕಲ್, ಆನಂದ ಬೈಲೂರು, ಸತೀಶ್ ಪೂಜಾರಿ, ಪ್ರಭಾಕರ ಅಂಬಲ್ತೆರೆ, ಶಾಂತಾರಾಮ ಆಚಾರ್, ಕೋಶಾಧಿಕಾರಿ ಅಬ್ರಾರ್ ಅಹ್ಮದ್ , ಉಪ ಕಾರ್ಯದರ್ಶಿ ಅಮರ್ ನಂತೂರ್, ಜೀವನ್ ಕುಕ್ಯಾನ್, ಸಮಾಜ ಸೇವಕ ಬಾಲ ಸಾಲಿಯಾನ್ ಎರ್ಮಾಳ್ ಶ್ರೀ ವಿಜ್ಞೇಶ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಕರ್ನಾಟಕ ಎನ್ ಆರ್ ಐ ಫೋರಮ್, ಅಬುಧಾಬಿ ಕರ್ನಾಟಕ ಸಂಘ, ಬಿಲ್ಲವಾಸ್ ದುಬೈ, ಕನ್ನಡಿಗರು ದುಬೈ, ಕನ್ನಡ ಪಾಠಶಾಲೆ, ಅಂತರ್ ರಾಷ್ಟ್ರೀಯ ಕನ್ನಡ ಫೆಡರೇಶನ್, ಬ್ಯಾರೀಸ್ ಕಲ್ಚರಲ್ ಫೋರಮ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, ಕೆಸಿಎಫ್, ಮಾರ್ಗದೀಪ ಸೇವಾ ಸಂಸ್ಥೆ, ಬಂಟ್ಸ್ ಅಸೋಸಿಯೇಷನ್, ಮೂಳೂರು ವೆಲ್ಫೇರ್ ಫೋರಮ್, ಅಲ್ ಕಮರ್ ಟ್ರಸ್ಟ್, ಮೊಗವೀರ್ಸ್ ದುಬೈ, ಅಲ್ ಇಸ್ಲಾಮೀಯ ಯೂಥ್ ಫೆಡರೇಶನ್ , ತವಕ್ಕಲ್ ಓವರ್ಸೀಸ್ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಕ್ತದಾನಕ್ಕೆ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷ ಎಂಇ ಮೂಳೂರು ಕರ್ನಾಟಕ ಸಂಘ ಶಾರ್ಜಾದ ಸಂಕ್ಷಿಪ್ತ ಪರಿಚಯ ನೀಡುತ್ತಾ ನಾವೆಲ್ಲ ಕನ್ನಡಿಗರು ಎಂಬ ನೆಲೆಯಲ್ಲಿ ಸೇವೆ ಸಲ್ಲಿಸುತ್ತಾ ಸಾಮಾಜಿಕ ಹಾಗು ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತೆಯ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿವೆ ಎಂದರು.
ಸಂಘದ ಮುಖ್ಯ ಸಲಹೆಗಾರರಾದ ಪ್ರವೀಣ್ ಶೆಟ್ಟಿ ಸಂಸ್ಥೆಯ ಧ್ಯೇಯೋದೇಶಗಳ ಬಗ್ಗೆ ವಿವರಿಸುತ್ತಾ ಸಂಸ್ಥೆಗೆ ಶ್ರೇಯಸ್ಸನ್ನು ಬಯಸಿದರು ಮತ್ತು ಬರುವ ತಿಂಗಳು ಕೆಎನ್ಆರ್ ಐ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ವಿವರಣೆ ನೀಡಿ ಕನ್ನಡಾಭಿಮಾನಿಗಳ ಸಹಕಾರ ಕೋರಿದರು.
ಸಂಘದ ಇನ್ನೋರ್ವ ಮುಖ್ಯ ಸಲಹೆಗಾರ ಹರೀಶ್ ಶೇರಿಗಾರ್ ಸಂದರ್ಭಯೋಚಿತವಾಗಿ ಮಾತನಾಡಿದರು ಹಾಗು ಸಂಸ್ಥೆಯ ಕಾರ್ಯಕ್ಕೆ ಮೆಚ್ಚಿಗೆ ಸೂಚಿಸಿ ಶುಭ ಹಾರೈಸಿದರು.
ಬಿಸಿಎಫ್ ಕಾರ್ಯದರ್ಶಿ ಹಾಗೂ ಲಂಡನ್ ಸಿಟಿ ಕಾಲೇಜಿನ ಡೀನ್ ಆ್ಯಂಡ್ ಡೈರೆಕ್ಟರ್ ಆದ ಡಾ. ಕಾಪು ಮೊಹಮ್ಮದ್ ಅವರು ಸಂಸ್ಥೆಯ ಕಾರ್ಯಕ್ಕೆ ಮೆಚ್ಚಿಗೆ ಸೂಚಿಸುತ್ತಾ ಶುಭ ಹಾರೈಸಿದರು. ಸಲಹೆಗಾರರಾದ ಸುಗಂದ್ ರಾಜ್ ಬೇಕಲ್ ವಂದಿಸಿದರು.
ಯುನಿಕ್ ಸಂಸ್ಥೆಯ ತಹ್ಸೀನ್ ಶೇಕ್ ಮತ್ತು ಬ್ರಿಟಾನಿಯ ಸಂಸ್ಥೆಯ ವಾಸು ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಸೇರಿದ ಎಲ್ಲರಿಗೂ ಉಪಹಾರ ನೀಡಲಾಯಿತು. ಸರ್ಟಿಫಿಕೇಟ್ ಮತ್ತು ರೋಲ್ ಅಪ್ ಮೊದಲಾದನ್ನು ಉಚಿತವಾಗಿ ಒದಗಿಸುವುದರ ಮೂಲಕ ಡಿಜಿಟಲ್ ವರ್ಲ್ಡ್ ಗ್ರೂಪ್ ಇದರ ಗೋಡ್ವಿನ್ ಕಾರ್ಯಕ್ರಮಕ್ಕೆ ಸಹಕರಿಸಿದರು. ರಕ್ತದಾನಿಗಳಿಗೆ ರಕ್ತದಾನದ ಸನದನ್ನು ಸಂಘದ ಪರವಾಗಿ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ನಮ್ಮೊಂದಿಗೆ ಸಹಕರಿಸಿದ ದುಬೈ ಹೆಲ್ತ್ ಅಥಾರಿಟಿ ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲ ರಕ್ತದಾನಿಗಳು, ಕರ್ನಾಟಕ ಸಂಘ ಶಾರ್ಜಾದ ಪದಾಧಿಕಾರಿಗಳು, ಪ್ರಾಯೋಜಕರು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹಿತ ಚಿಂತಕರಿಗೆ ಕರ್ನಾಟಕ ಸಂಘ ಶಾರ್ಜಾ ಅಭಾರಿಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.