ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡುವ ತನಕ ನ್ಯಾಯಯುತ ತನಿಖೆ ಅಸಾಧ್ಯ: ರಾಕೇಶ್ ಟಿಕಾಯತ್
ಲಖಿಂಪುರಖೇರಿ ಹಿಂಸಾಚಾರ ಪ್ರಕರಣ
ಹೊಸದಿಲ್ಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡುವ ತನಕ ಲಖಿಂಪುರಖೇರಿ ಹಿಂಸಾಚಾರ ಪ್ರಕರಣದ ನ್ಯಾಯಯುತ ತನಿಖೆ ಅಸಾಧ್ಯ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಗುರುವಾರ ಹೇಳಿದ್ದಾರೆ.
ಹಿಂಸಾಚಾರ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮೇಲೆ ಕೇಂದ್ರ ಸಚಿವರು ಪ್ರಭಾವ ಬೀರುತ್ತಿದ್ದಾರೆ ಎಂದು ಟಿಕಾಯತ್ ಆರೋಪಿಸಿದರು.
ಘಟನೆಯ ಪ್ರಮುಖ ಆರೋಪಿ ಸಚಿವರ ಪುತ್ರನನ್ನು ಕೆಂಪು ರತ್ನಗಂಬಳಿಯೊಂದಿಗೆ ಸ್ವಾಗತಿಸಿರುವುದು ರೈತರ ಆಕ್ರೋಶವನ್ನು ಹೆಚ್ಚಿಸಿದೆ ಎಂದರು.
ಅಕ್ಟೋಬರ್ 3ರಂದು ನಡೆದ 8 ಜನರು ಮೃತಪಟ್ಟಿರುವ ಹಿಂಸಾಚಾರ ಘಟನೆಯಲ್ಲಿ ಅಜಯ್ ಮಿಶ್ರಾ ಪುತ್ರ ಆಶೀಶ್ ಪ್ರಮುಖ ಆರೋಪಿಯಾಗಿದ್ದು, ಸುಪ್ರೀಂಕೋರ್ಟ್ ಆರೋಪಿಯನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ ಬಳಿಕ ಆಶೀಶ್ ನನ್ನು ಬಂಧಿಸಲಾಗಿತ್ತು.
Next Story