varthabharthi


ಅಂತಾರಾಷ್ಟ್ರೀಯ

ಸೌದಿ ಅರೇಬಿಯಾ: ಆರೋಗ್ಯ, ಹಜ್ ಇಲಾಖೆಗೆ ನೂತನ ಸಚಿವರ ನೇಮಕ

ವಾರ್ತಾ ಭಾರತಿ : 16 Oct, 2021

ರಿಯಾದ್, ಅ.16: ಸೌದಿ ಅರೆಬಿಯಾದ ಆರೋಗ್ಯ ಇಲಾಖೆ, ಹಜ್ ಮತ್ತು ಉಮ್ರಾ ಇಲಾಖೆಗಳಿಗೆ ನೂತನ ಸಚಿವರ ನೇಮಕದ ಸಹಿತ ಹಲವು ರಾಜಾಜ್ಞೆಗಳನ್ನು ಶುಕ್ರವಾರ ಜಾರಿಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ಮಾಜಿ ಸಚಿವ ತಾಫಿಕ್ ಅಲ್ರಬಿಯಾರನ್ನು ಹಜ್ ಮತ್ತು ಉಮ್ರಾ ಇಲಾಖೆಯ ನೂತನ ಸಚಿವರನ್ನಾಗಿ ನೇಮಕಗೊಳಿಸಲಾಗಿದೆ. ‌

ಫಹದ್ ಅಲ್ ಜಲಜೆಲ್ ನೂತನ ಆರೋಗ್ಯ ಸಚಿವರಾಗಿ ನೇಮಕಗೊಂಡಿದ್ದಾರೆ. ಸಾರಿಗೆ ಇಲಾಖೆಯ ಸಹಾಯಕ ಸಚಿವರಾಗಿದ್ದ ಅಬ್ದುಲ್ ಅಝೀರ್ ಬಿನ್ ಅಬ್ದುಲ ರೆಹಮಾನ್ ಅಲ್ಅರಿಫಿಯನ್ನು ಸಚಿವ ಸಂಪುಟದ ಸಚಿವಾಲಯದ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಮುತ್ಲಖ್ ಬಿನ್ ಸಲೀಂ ಅಲ್ಅಝೀಮರನ್ನು ಜನರಲ್ ಹುದ್ದೆಗೆ ಭಡ್ತಿ ನೀಡಿ ಜಂಟಿ ಪಡೆಗಳ ಕಮಾಂಡರ್ ಆಗಿ ನೇಮಿಸಲಾಗಿದೆ. ಯಾಂಬು, ಉಮ್ಲುಜ್, ಅಲ್-ವಾಜ್ ಮತ್ತು ದುಬಾ ನಗರಗಳ ಅಭಿವೃದ್ಧಿಗಾಗಿ ನೂತನ ಪ್ರಾಧಿಕಾರ ರಚಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)