varthabharthi


ಕ್ರೀಡೆ

ನೇಪಾಳ ತಂಡವನ್ನು ಮಣಿಸಿದ ಭಾರತದ ಫುಟ್ಬಾಲ್ ತಂಡಕ್ಕೆ ಸ್ಯಾಫ್ ಚಾಂಪಿಯನ್ ಶಿಪ್ ಕಿರೀಟ

ವಾರ್ತಾ ಭಾರತಿ : 16 Oct, 2021

photo: AIFF

ಮಾಲ್ಡೀವ್ಸ್, ಅ.16: ನೇಪಾಳ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಫುಟ್ಬಾಲ್ ತಂಡ 8ನೇ ಬಾರಿ ಸ್ಯಾಫ್ ಚಾಂಪಿಯನ್ ಶಿಪ್  ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಪರ ಸುನೀಲ್ ಚೆಟ್ರಿ(49ನೇ ನಿಮಿಷ), ಸುರೇಶ್ ಸಿಂಗ್ (50ನೇ ನಿಮಿಷ) ಹಾಗೂ ಅಬ್ದುಲ್ ಸಮದ್(90+1)ತಲಾ ಒಂದು ಗೋಲು ಗಳಿಸಿದರು. ಮೊದಲ ಬಾರಿ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ್ದ ನೇಪಾಳ ನಿರಾಶದಾಯಕ ಪ್ರದರ್ಶನ ನೀಡಿತು.

ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು.

ಭಾರತವು ಈ ಹಿಂದೆ 1993, 1997, 1999, 2005, 2009, 2011, 2015ರಲ್ಲಿ ಸ್ಯಾಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)