varthabharthi


ರಾಷ್ಟ್ರೀಯ

ಜಮ್ಮುಕಾಶ್ಮೀರ: ನಾಪತ್ತೆಯಾದ ಇಬ್ಬರು ಯೋಧರ ಮೃತದೇಹ ಪತ್ತೆ

ವಾರ್ತಾ ಭಾರತಿ : 16 Oct, 2021

ಶ್ರೀನಗರ, ಅ. 16: ಜಮ್ಮು ಹಾಗೂ ಕಾಶ್ಮೀರ ಪೂಂಛ್ ಜಿಲ್ಲೆಯಲ್ಲಿ ಗುರುವಾರ ಸಂಜೆ ಶಂಕಿತ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯ ಸಂದರ್ಭ ನಾಪತ್ತೆಯಾಗಿದ್ದ ಕಿರಿಯ ಕಮಿಷನ್ಡ್ ಅಧಿಕಾರಿ ಸೇರಿದಂತೆ ಇಬ್ಬರು ಯೋಧರ ಮೃತದೇಹವನ್ನು ಸೇನಾ ಪಡೆ ಪತ್ತೆ ಮಾಡಿದೆ.

ಶಂಕಿತ ಉಗ್ರರು ಅಡಗಿದ್ದ ಈ ಪ್ರದೇಶದಲ್ಲಿ ಪ್ರಮುಖ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಈ ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಶಂಕಿತ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಯೋಧರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಶಂಕಿತ ಉಗ್ರರೊಂದಿಗೆ ಗುರುವಾರ ನಡೆದ ಭಾರೀ ಗುಂಡಿನ ಚಕಮಕಿ ಸಂದರ್ಭ ಕಿರಿಯ ಕಮಿಷನ್ಡ್ ಅಧಿಕಾರಿ ಹಾಗೂ ಓರ್ವ ಯೋಧ ನಾಪತ್ತೆಯಾಗಿದ್ದರು. ಪೂಂಚ್-ರಾಜೌರಿ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಯೋಧರಾದ ಯೋಗಾಂಬರ್ ಸಿಂಗ್ ಹಾಗೂ ವಿಕ್ರಮ್ ಸಿಂಗ್ ನೇಗಿ ಮೃತಪಟ್ಟಿದ್ದರು. ಅನಂತರ ನಾಲ್ಕು ದಿನದ ಬಳಿಕ ಇದೇ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಐವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)