ಬೆಳಗಾವಿ: ಹಿಂದುತ್ವ ಸಂಘಟನೆಗಳಿಂದ ದಾಳಿಗೊಳಗಾಗಿದ್ದ ವ್ಯಕ್ತಿ ʼಹಿಟ್ ಆಂಡ್ ರನ್ʼ ಅಪಘಾತದಲ್ಲಿ ಗಂಭೀರ ಗಾಯ
ʼಪೂರ್ವಯೋಜಿತ ಕೃತ್ಯʼ ಎಂದು ಆರೋಪಿಸಿದ ಕುಟುಂಬಸ್ಥರು
Photo: Indianexpress.com
ಬೆಳಗಾವಿಯ: ಅಕ್ಟೋಬರ್ 8ರಂದು ಬಲಪಂಥೀಯ ಹಿಂದುತ್ವ ಸಂಘಟನೆಯ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ ಚಿಕನ್ ಸ್ಟಾಲ್ ಮಾಲಕನೊಬ್ಬ ಮಂಗಳವಾರ ಸಂಜೆ ನಡೆದ ಹಿಟ್ ಎಂಡ್ ರನ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಅಪಘಾತ "ಪೂರ್ವಯೋಜಿತ" ಎಂದು ಗಾಯಾಳು ಹಸನ್ ಸಾಬ್ ಅವರ ಪತ್ನಿ ಅಫ್ಸಾನ ಹಸನ್ ಸಾಬ್ ಖುರೇಶಿ ಆರೋಪಿಸಿದ್ದಾರೆ ಎಂದು indianexpress.com ವರದಿ ಮಾಡಿದೆ. ಇಬ್ಬರೂ ಬೆಳಗಾವಿಯಿಂದ ಯಮುನಾಪುರದಲ್ಲಿರುವ ತಮ್ಮ ಮನೆಯತ್ತ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅವರ ವಾಹನದ ಹಿಂದಿನಿಂದ ಬಂದ ಬೈಕ್ ಒಂದು ಅವರ ದ್ವಿಚಕ್ರವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು ಎಂದು ಅಫ್ಸಾನ ಹೇಳುತ್ತಾರೆ.
ಅಕ್ಟೋಬರ್ 8ರಂದು ಹತ್ತಿರದ ದೇವಸ್ಥಾನ ಉದ್ಘಾಟನಾ ಸಮಾರಂಭ ಇರುವುದರಿಂದ ಅಂಗಡಿ ಮುಚ್ಚುವಂತೆ ಹೇಳಿದ್ದ ಸಂಘಟನೆಯೊಂದರ ಸದಸ್ಯರು ಅವರ ಕೋಳಿ ಅಂಗಡಿಗೆ ದಾಳಿ ನಡೆಸಿದ್ದರು. ಸೂಚಿಸಿದಂತೆ ಅಂಗಡಿ ಮುಚ್ಚಿದ್ದರೂ ಶುಚಿತ್ವದ ಕೆಲಸಕ್ಕಾಗಿ ಇಬ್ಬರು ಕೆಲಸಗಾರರನ್ನು ಅಲ್ಲಿಗೆ ಕಳುಹಿಸಿದ್ದಾಗ ಘಟನೆ ನಡೆದಿತ್ತು ಎಂದು ಅಫ್ಸಾನ ಹೇಳುತ್ತಾರೆ.
ಘಟನೆ ನಂತರ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆದಿದ್ದರಿಂದ ಯಾವುದೇ ದೂರು ದಾಖಲಾಗಿರಲಿಲ್ಲ. ತರುವಾಯ ದಾಳಿಯ ವೀಡಿಯೋ ವೈರಲ್ ಆಗಿತ್ತು.
ಅಪಘಾತ ಪೂರ್ವಯೋಜಿತವಾಗಿತ್ತು ಎಂದು ಪೊಲೀಸ್ ದೂರು ದಾಖಲಿಸುವುದಾಗಿ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿರುವ ಅಫ್ಸಾನ ಹೇಳುತ್ತಾರೆ.
#Karnataka
— Kiran Parashar (@KiranParashar21) October 20, 2021
Chicken shop owner Hasan Saab suffers injuries after his bike got rammed from behind in a hit and run incident.
His shop was vandalised by a members on the day of local temple event. The police had held compromise meeting. @IndianExpress @IEBengaluru pic.twitter.com/RD4YQDRWwT