ನ.10ಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ಉಡುಪಿ, ಅ.25: ಉಡುಪಿಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ನವೆಂಬರ್ 10ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅ.27ರೊಳಗೆ ಪರವಾನಿಗೆ ಕುರಿತು ಸ್ವೀಕರಿಸಿದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಸಭೆಯಲ್ಲಿ ಸಂಬಂಧ ಪಟ್ಟ ಬಸ್ಸು ಮಾಲಕರು ತಪ್ಪದೇ ಹಾಜರಾಗುವಂತೆ ಹಾಗೂ ಸಭೆಯ ಪ್ರಾರಂಭದ ಅರ್ಧ ಗಂಟೆ ಮೊದಲು ಸಾರ್ವಜನಿಕರಿಂದ ಸಾರಿಗೆ ವ್ಯವಸ್ಥೆ ಬಗ್ಗೆ ಕುಂದು ಕೊರತೆಗಳನ್ನು ಆಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story