varthabharthi


ರಾಷ್ಟ್ರೀಯ

ಆರ್ಯನ್ ಖಾನ್ ಪ್ರಕರಣ:ಭ್ರಷ್ಟಾಚಾರ ಆರೋಪ ಮಾಡಿದ್ದ ಸ್ವತಂತ್ರ ಸಾಕ್ಷಿಗೆ ಮಹಾರಾಷ್ಟ್ರ ಪೊಲೀಸ್ ರಕ್ಷಣೆ

ವಾರ್ತಾ ಭಾರತಿ : 25 Oct, 2021

photo: ANI

ಮುಂಬೈ: ಆರ್ಯನ್ ಖಾನ್ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ  ಪ್ರಭಾಕರ್ ಸೈಲ್ ಅವರ ಭದ್ರತೆಯ ಮನವಿಯನ್ನು ಮಹಾರಾಷ್ಟ್ರ ಸರಕಾರ ಪುರಸ್ಕರಿಸಿದೆ ಎಂದು ರಾಜ್ಯದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಸೋಮವಾರ ಹೇಳಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (ಎನ್ ಸಿಬಿ) ಸ್ವತಂತ್ರ ಸಾಕ್ಷಿಯಾಗಿರುವ ಸೈಲ್ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹಾಗೂ ಇತರರು ನಟ ಶಾರುಖ್ ಖಾನ್ ಅವರಿಂದ 25 ಕೋಟಿ.ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು  ಪ್ರತಿಪಾದಿಸಿದ್ದಾರೆ.

"ಭದ್ರತೆಗಾಗಿ ಪ್ರಭಾಕರ್ ಸೈಲ್ ಪೊಲೀಸರನ್ನು ಸಂಪರ್ಕಿಸಿದ್ದರು ಮತ್ತು ಅವರಿಗೆ ಭದ್ರತೆ ನೀಡಲಾಗಿದೆ. ಎಲ್ಲರಿಗೂ ರಕ್ಷಣೆ ನೀಡುವುದು ನಮ್ಮ ಕರ್ತವ್ಯ" ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)