ಅಜ್ಮಾನ್‌ನ ತುಂಬೆ ಮೆಡಿಸಿಟಿಗೆ ಇಟಲಿ ಸಚಿವ ರೊಬರ್ಟೊ ಸ್ಪೆರಾಂಝ ಭೇಟಿ
ಎರಡು ಒಪ್ಪಂದಗಳಿಗೆ ತುಂಬೆ ಸಮೂಹ ಸಹಿ
ಅಜ್ಮಾನ್ (ಯುಎಇ) : ಇಟಲಿಯ ಆರೋಗ್ಯ ಸಚಿವ ರೋಬರ್ಟೋ ಸ್ಪೆರಾಂಝ ಅವರು ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿಗೆ ಶನಿವಾರ ವಿಶೇಷ ಭೇಟಿ ನೀಡಿದರು. ತುಂಬೆ ಸಮೂಹದ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರು ಸಚಿವರನ್ನು ಮಾಡಿಕೊಂಡರು.
ರೋಬರ್ಟೋ ಸ್ಪೆರಾಂಝ ಅವರ ಈ ಭೇಟಿಯಿಂದ ತುಂಬೆ ಸಮೂಹ ಹಾಗೂ ಇಟಲಿಯ ಎರಡು ಪ್ರತಿಷ್ಠಿತ ಸಂಸ್ಥೆಗಳಾದ ಸ್ಯಾನ್ ರಫೈಲೆ ವಿಶ್ವವಿದ್ಯಾನಿಲಯ (ಯುಎನ್‌ಐಎಸ್‌ಆರ್) ಹಾಗೂ ಗ್ರುಪ್ಪೊ ಸ್ಯಾನ್ ಡೊನಾಟೊ (ಜಿಎಸ್‌ಡಿ) ನಡುವೆ ನೂತನ ವ್ಯೂಹಾತ್ಮಕ ಒಪ್ಪಂದ ಹಾಗೂ ಸಹಕಾರ ಏರ್ಪಟ್ಟಿದೆ. ಆರೋಗ್ಯ ವೃತ್ತಿ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಸಂಯೋಜನೆ ಉತ್ತೇಜಿಸಲು ಪ್ರೊ. ಹೊಸ್ಸಾಂ ಹಮ್ದಿ ಪ್ರತಿನಿಧಿಸಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ಹಾಗೂ ವಿಟಾ ಸೆಲ್ಯುಟೆ ಸ್ಯಾನ್ ರಫೈಲೆ ವಿಶ್ವವಿದ್ಯಾನಿಲಯದ ಅಧ್ಯಕ್ಷ ಡಾ. ಪೌಲೊ ರೊಟೆಲಿ ಪ್ರತಿಧಿಸಿದ ಇಟಲಿಯ ಸ್ಯಾನ್ ರೆಪೈಲ್ ವಿಶ್ವವಿದ್ಯಾನಿಲಯ ಮೊದಲ ತಿಳಿವಳಿಕ ಒಪ್ಪಂದಕ್ಕೆ ಸಹಿ ಹಾಕಿದವು.
ತುಂಬೆ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಹೃದ್ರೋಗ ವಿಜ್ಞಾನ ವಿಭಾಗದ ಅಭಿವೃದ್ಧಿ ಹಾಗೂ ಸಬಲೀಕರಣಕ್ಕಾಗಿ ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಪ್ರತಿನಿಧಿಸಿದ ತುಂಬೆ ವಿಶ್ವವಿದ್ಯಾನಿಲಯ ಆಸ್ಪತ್ರೆ ಹಾಗೂ ಜಿಕೆಎಸ್‌ಡಿ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್‌ನ ಅಧ್ಯಕ್ಷ ಡಾ. ಕಾಮೆಲ್ ಘಿರಿಬಿ ಅವರು ಪ್ರತಿನಿಧಿಸಿದ ಇಟಲಿಯ ಗ್ರುಪ್ಪೊ ಸ್ಯಾನ್ ಡೊನಾಟೊ (ಜಿಎಸ್‌ಡಿ) ಎರಡನೇ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದವು.