5000 ಕಿ.ಮೀ ಗುರಿಯನ್ನು ನಿಖರವಾಗಿ ತಲುಪಬಲ್ಲ ಅಗ್ನಿ-ವಿ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ
photo: India tv
ಹೊಸದಿಲ್ಲಿ: 5,000 ಕಿ.ಮೀ ದೂರದ ಗುರಿಗಳನ್ನು ನಿಖರವಾಗಿ ಕ್ರಮಿಸಬಲ್ಲ ಸಾಮರ್ಥ್ಯದ ಕ್ಷಿಪಣಿಯಾಗಿರುವ ಅಗ್ನಿ-5 ಅನ್ನು ಭಾರತ ಇಂದು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಚೀನಾಕ್ಕೆ ಬಲವಾದ ಸಂದೇಶವಾಗಿದೆ ಎಂದು ಪರಿಗಣಿಸಲಾಗಿದೆ.
ಅಗ್ನಿ-5 ಅನ್ನು ವಿಶಾಲವಾಗಿ ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಐಸಿಎಂಬಿ ವರ್ಗಕ್ಕೆ ಸೇರುತ್ತದೆ, ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ರಾತ್ರಿ 7:50 ಕ್ಕೆ ಉಡಾವಣೆ ಮಾಡಲಾಯಿತು.
ಕ್ಷಿಪಣಿಯು ಮೂರು-ಹಂತದ ಘನ ಇಂಧನ ಎಂಜಿನ್ ಅನ್ನು ಬಳಸುತ್ತದೆ ಹಾಗೂ ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ ಗುರಿಗಳನ್ನು ತಲುಪಬಹುದು.
2012ರಲ್ಲಿ ಮೊದಲ ಬಾರಿ ಅಗ್ನಿ-5 ಅನ್ನು ಪರೀಕ್ಷಿಸಲಾಗಿತ್ತು. ಅಗ್ನಿ-1 ರಿಂದ 5 ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ.
Next Story