ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಮೋಟಿವೇಷನಲ್ ಸ್ಪೀಕರ್ ನಸ್ರೀನ್ ಅಹ್ಮದ್ ಬಾವಗೆ ಸನ್ಮಾನ
ಅಬುಧಾಬಿ : ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ಇದರ ವತಿಯಿಂದ ಯುಎಇ ಪ್ರವಾಸದಲ್ಲಿರುವ ಮಂಗಳೂರಿನ ಖ್ಯಾತ ಮೋಟಿವೇಷನಲ್ ಸ್ಪೀಕರ್ ನಸ್ರೀನ್ ಅಹ್ಮದ್ ಬಾವ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಡಬ್ಲ್ಯೂಫ್ ಪ್ರದಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್ ಸ್ವಾಗತ ಭಾಷಣ ಮಾಡಿದರು. ನಸ್ರೀನ್ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಬಿಡಬ್ಲ್ಯೂಫ್ ನ ಪದಾಧಿಕಾರಿಗಳು ಸ್ಮರಣಿಕೆ ನೀಡಿ ಅವರನ್ನು ಸನ್ಮಾನಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ವೃತ್ತಿ ಜೀವನ ಮತ್ತು ಪ್ರತಿಯೊಬ್ಬರಲ್ಲೂ ಇರಬೇಕಾದ ಸಾಮುದಾಯಿಕ ಬದ್ಧತೆಯ ಕುರಿತು ಮಾತನಾಡಿದರು.
ಹಮೀದ್ ಗುರುಪುರ, ಮೊಹಮ್ಮದ್ ಕಲ್ಲಾಪು , ಇಮ್ರಾನ್ ಅಹ್ಮದ್, ನವಾಝ್ ಅಹ್ಮದ್, ಇರ್ಫಾನ್ ಅಹ್ಮದ್, ಜಲೀಲ್ ಬಜ್ಪೆ, ರಶೀದ್ ವಿ.ಕೆ. ನಿಝಾಮ್ ವಿಟ್ಲ, ಭಾಷಾ ಮತ್ತು ತೌಶೀದ್ ಬಾವ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.