ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭೋತ್ಸವ
ವಿಟ್ಲ, ನ.10: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಎಲ್ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭೋತ್ಸವ ಬುಧವಾರ ನಡೆಯಿತು.
ಸದರ್ ಉಮರ್ ಸಅದಿ ದುಆ ನೆರವೇರಿಸಿದರು.
ಶಾಲೆಯನ್ನು ತಳಿರು ,ತೋರಣಗಳಿಂದ ಶೃಂಗರಿಸಿ, ಬಲೂನ್ ಹಾಗೂ ಸಿಹಿತಿಂಡಿಗಳನ್ನು ನೀಡಿ ಚಪ್ಪಾಳೆಯ ಮೂಲಕ ಪುಟಾಣಿಗಳನ್ನು ತರಗತಿಗಳಿಗೆ ಸ್ವಾಗತಿಸಲಾಯಿತು.
ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಮುಖ್ಯ ಶಿಕ್ಷಕ ಮುನೈಝರ್ ಮುಡಿಪು, ಟ್ರಸ್ಟಿಗಳಾದ ಸಿದ್ದೀಕ್ ಮಾಲಮೂಲೆ, ಹನೀಫ್ ಎಂ.ಎ., ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ ಹಾಗೂ ಮದ್ರಸದ ಹಾಗೂ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Next Story