ಉಡುಪಿ ಕೆಥೋಲಿಕ್ ಸೊಸೈಟಿಯ ವಾರ್ಷಿಕ ಮಹಾಸಭೆ
ಉಡುಪಿ, ನ.12: ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 24ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಉಡುಪಿಯ ಡೊನ್ ಬೊಸ್ಕೊ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಎಲೋಶಿಯಸ್ ಡಿ ಅಲ್ಮೇಡಾ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಸ್ತುತ ವರ್ಷ ಶೇ.15ರಷ್ಟು ಲಾಭಾಂಶ ಘೋಷಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಶೋಕಾ ಮಾತಾ ಇಗರ್ಜಿಯ ಧರ್ಮಗುರು ಅ.ವಂ. ಫಾ.ಚಾರ್ಲ್ಸ್ ಮಿನೇಜಸ್ ಆಶೀರ್ವಚನ ನೀಡಿದರು. ಕಾರ್ಯದರ್ಶಿ ಪ್ರಾಂಕ್ ಪೀಟರ್ ಕಾರ್ಡೊಜಾ ವಾರ್ಷಿಕ ವರದಿ ವಾಚಿಸಿದರು.
ನಿರ್ದೇಶಕರಾದ ಇಗ್ನೇಶಿಯಸ್ ಮೊನಿಸ, ಪ್ರಾಂಕ್ಲಿನ್ ಮಿನೇಜಸ್, ಪರ್ಸಿ ಡಿಸೋಜ, ಜೇಮ್ಸ್ ಡಿಸೋಜ, ಫೆಲಿಕ್ಸ್ ಪಿಂಟೋ, ಆರ್ಟಿ ಬೋಲ್ಡ್ ಡಿಸೋಜ, ಕೆವಿನ್ ಪಿರೇರಾ, ಗಿಲ್ಬರ್ಟ್ ಫೆರ್ನಾಂಡಿಸ್, ಡಾ.ನೇರಿ ಕರ್ನೆಲಿಯೋ ಉಪಸ್ಥಿತರಿದ್ದರು.
ನಿರ್ದೇಶಕಿ ಜಾಸ್ಮಿನ್ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು. ಉಪಾ್ಯಕ್ಷ ಲುವಿಸ್ ಲೊಬೋ ವಂದಿಸಿದರು.
Next Story