ವೀಡಿಯೋ ಚಿತ್ರೀಕರಿಸುವ ವಸತಿ ತರಬೇತಿ ಕಾರ್ಯಾಗಾರ
ಬೆಂಗಳೂರು, ನ. 12: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ವಿಜ್ಞಾನ ಪ್ರಸಾರ್ ಸಂಸ್ಥೆಯ ಸಹಯೋಗದೊಂದಿಗೆ ವೀಡಿಯೋ ಚಿತ್ರೀಕರಿಸುವ ವಸತಿ ತರಬೇತಿ ಕಾರ್ಯಾಗಾರವನ್ನು ನ.23ರಿಂದ 25ರವರೆಗೆ ಬೆಂಗಳೂರಿನ ಅಕಾಡೆಮಿ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಆಸಕ್ತರು ಯು.ಆರ್.ರಾವ್ ವಿಜ್ಞಾನ ಭವನ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಮಹಾದ್ವಾರ, ಜಿ.ಕೆ.ವಿ.ಕೆ.ಆವರಣ, ದೊಡ್ಡಬೆಟ್ಟಹಳ್ಳಿ ಬಸ್ ನಿಲ್ದಾಣ, ವಿದ್ಯಾರಣ್ಯಪುರ ಬೆಂಗಳೂರು-560097. ಗೂಗಲ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವುದು. ಹೆಸರಾಂತ ಛಾಯಾಗ್ರಾಹಕರು ಮತ್ತು ದಿಗ್ದರ್ಶಕರು ತರಬೇತಿಯನ್ನು ನೀಡಲಿದ್ದಾರೆ. ಶಿಬಿರಾರ್ಥಿಗಳಿಗೆ ಉಚಿತ ಭೋಜನ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಆದರೆ ಪ್ರಯಾಣ ವೆಚ್ಚವನ್ನು ಶಿಬಿರಾರ್ಥಿಗಳೇ ಭರಿಸುವುದು. ನೋಂದಣಿಗೆ ಕೊನೆಯ ದಿನಾಂಕ ನ.19 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶರ್ಮ, ಸಂಯೋಜಕರು, ಕುತೂಹಲಿ-98866 40328 ಅಥವಾ ಕು.ಅಮೃತೇಶ್ವರಿ-97394 67440 ಅಥವಾ ಕೆ. ಸಿ.ಉಮೇಶ್, ಕೆಎಸ್‍ಟಿಎ-900867 5123 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.