ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಮೃತ್ಯು
ಅಬ್ದುರ್ರಹ್ಮಾನ್ ರಿಲ್ವಾನ್
ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಯುವಕನೋರ್ವ ಮೃತಪಟ್ಟ ಘಟನೆ ಅತ್ತಾವರದಲ್ಲಿ ಶನಿವಾರ ರಾತ್ರಿ ನಡೆದಿದೆ. ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುರ್ರಹ್ಮಾನ್ ರಿಲ್ವಾನ್(30) ಮೃತಪಟ್ಟವರು.
ಶನಿವಾರ ಅತ್ತಾವರದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ರಾಜಸ್ಥಾನದಿಂದ ಗ್ರಾನೈಟ್ ತುಂಬಿದ ಲಾರಿ ಬಂದಿತ್ತು. ಈ ವೇಳೆ ಕಟ್ಟಡದ ರೈಟರ್ ಆಗಿದ್ದ ರಿಲ್ವಾನ್ ರಲ್ಲಿ ಗ್ರಾನೈಟ್ನ ಫೋಟೊ ತೆಗೆಯಲು ಕಟ್ಟಡದ ಸೂಪರ್ ವೈಸರ್ ಸೂಚಿಸಿದ್ದಾರೆನ್ನಲಾಗಿದೆ. ಅದರಂತೆ ಫೋಟೊ ತೆಗೆಯಲು ಅವರು ಲಾರಿಯ ಹಿಂಬದಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆಲಾರಿಯಲ್ಲಿದ್ದ ಗ್ರಾನೈಟ್ ಏಕಾಏಕಿ ರಿಲ್ವಾನ್ರ ಮೈಮೇಲೆ ಬಿದ್ದಿದ್ದು, ಪರಿಣಾಮ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story