2 ಪವಿತ್ರ ಮಸೀದಿಗಳಿಗೆ ಭೇಟಿ ನೀಡಲು ಸಾಗರೋತ್ತರ ಯಾತ್ರಿಗಳಿಗೆ ಅನುಮತಿ ಪತ್ರ: ಸೌದಿ ಅರೆಬಿಯಾ ಘೋಷಣೆ
ರಿಯಾದ್, ನ.14: ಉಮ್ರಾ ಯಾತ್ರೆ ಮತ್ತು ಮಸ್ಜಿದುಲ್ ಹರಾಮ್ ಗ್ರಾಂಡ್ ಮಸೀದಿಯಲ್ಲಿ ಪ್ರಾರ್ಥನೆಗೆ, ಹಾಗೂ ಮದೀನಾದ ಮಸ್ಜಿದುನ್ನಬವಿಯಲ್ಲಿ ಪ್ರಾರ್ಥನೆಗೆ ಸಾಗರೋತ್ತರ ಯಾತ್ರಿಗಳಿಗೆ ಅನುಮತಿ ಪತ್ರ ಒದಗಿಸುವ ಸೇವೆಯನ್ನು ಆರಂಭಿಸಿರುವುದಾಗಿ ಸೌದಿ ಅರೆಬಿಯಾದ ಹಜ್ ಮತ್ತು ಉಮ್ರಾ ಇಲಾಖೆ ಘೋಷಿಸಿದೆ.
ಸೌದಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ ಪ್ರಾಧಿಕಾರದ ಸಹಯೋಗದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಖುದಮ್ ವೇದಿಕೆಯ ಮೂಲಕ ನೋಂದಣಿ ಮಾಡಿಕೊಂಡ ಬಳಿಕ ಈಟ್ಮಾರ್ ಮತ್ತು ತವಕ್ಕಲ್ ಆ್ಯಪ್ ಮೂಲಕ ಈ ಸೇವೆಯ ಪ್ರಯೋಜನ ಪಡೆಯಬಹುದು ಎಂದು ಇಲಾಖೆ ಹೇಳಿದೆ. ಮಕ್ಕಾದ ಗ್ರಾಂಡ್ ಮಸೀದಿ, ಮದೀನಾದಲ್ಲಿರುವ ಮಸ್ಜಿದುನ್ನಬವಿ ಸೇರಿದಂತೆ ದೇಶದಾದ್ಯಂತ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ ಎಂದು ಅಕ್ಟೋಬರ್ 16ರಂದು ಇಲಾಖೆ ಘೋಷಿಸಿತ್ತು.
Next Story