ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಶಾಫಿ ಸಅದಿಗೆ ಸನ್ಮಾನ
ಮಂಗಳೂರು, ನ.22: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ನ ನೂತನ ಅಧ್ಯಕ್ಷ ವೌಲಾನಾ ಶಾಫಿ ಸಅದಿ ಅವರನ್ನು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಅಧ್ಯಕ್ಷ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರ ಮನೆಯಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಈ ಸಂದರ್ಭ ವಕ್ಫ್ ಬೋರ್ಡ್ ಸದಸ್ಯ ರಿಯಾಝ್ ಖಾನ್, ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಹಾಜಿ ಬಿ. ಅಬೂಬಕ್ಕರ್, ಡಾ.ಮುೂಹಮ್ಮದ್ ಅರೀಫ್ ಮಸೂದ್, ಹಾಜಿ ಮುಹಮ್ಮದ್ ಬಪ್ಪಳಿಗೆ, ಡಿ.ಎಂ. ಅಸ್ಲಂ, ಹಾಜಿ ರಿಯಾಝುದ್ಧೀನ್, ಎನ್.ಕೆ. ಅಬೂಬಕರ್, ಸಿ.ಎಂ. ಹನೀಫ್, ಸಿ.ಎಂ. ಮುಸ್ತಫ, ಅಹ್ಮದ್ ಬಾವ ಬಜಾಲ್, ಮೊಯಿದಿನ್ ಮೋನು, ಅಬೀದ್ ಜಲಿಹಾಲ್ ಉಪಸ್ಥಿತರಿದ್ದರು.
Next Story